ಹಾಸನ ಸಂಸದ ಪ್ರಜ್ವಲ ರೇವಣ್ಣ ಡರ್ಟಿ ಪಿಕ್ಚರ್ ಆರೋಪ ಕುರಿತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ,ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಯಾವಾಗಲೋ ಸುಮೊಟೋ ಪ್ರಕರಣ ದಾಖಲಿಸಬೇಕಿತ್ತು. ಅವರು ಹಾಸನದಿಂದ ಬೆಂಗಳೂರಿಗೆ ಹೋಗುವಾಗಲೇ, ಚೆಕ್ ಪೋಸ್ಟ್ ಯಾಕೆ ಹಾಕಲಿಲ್ಲ? ಚೆಕ್ ಪೋಸ್ಟ್ ಹಾಕಿ ಹಿಡಿಯಬಹುದ್ದಿತ್ತಲ್ವಾ? ರಾಜ್ಯ ಸರಕಾರ ಸರಿಯಾಗಿ ಹೋಂ ವರ್ಕ್ ಮಾಡಲಿಲ್ಲ ಎಂದು ಹೇಳಿದರು.
ದೇವೇಗೌಡರು ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನ ಅಮಾನತು ಮಾಡಿದ್ದಾರೆ. ರಾಜಕೀಯದಲ್ಲಿ ಏನ್ ಆಗಬಾರದಿತ್ತೋ, ಅದು ಆಗಿದೆ .ಯಾರಿಗೂ ಹೀಗೆ ಆಗಬಾರದು . ನಾವು ಮಾತನಾಡಿದರೆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗುತದಾ? ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ಅಂದರೆ, SIT ತನಿಖೆ ಆದಷ್ಟು ಬೇಗ ಸಂಪೂರ್ಣ ಆಗಬೇಕು . ರೆಕಾರ್ಡ್ ಸ್ಪೀಡ್ ನಲ್ಲಿ ತನಿಖೆ ಮಾಡಿ ತೋರಿಸಿ ಅಂತ ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿದ್ದು, ಜೆಡಿಎಸ್ ಮತ್ತು ಬಿಜೆಪಿ ಬೇರೆ ಬೇರೆ
ಪಕ್ಷವಾಗಿದ್ದು , ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಗಲೆ೦ದು ಮಾತ್ರ ಅವರ ಜೊತೆ ಹೊಂದಾಣಿಕೆ ಮಾಡಿಕೊ೦ಡಿದ್ದೇವೆ ಅಂತ ಹೇಳಿದ್ದಾರೆ .