Sunday, August 3, 2025
!-- afp header code starts here -->
Homebig breakingಲೋಕ ಸಮರಕ್ಕೆ ದಿನಾಂಕ ಫಿಕ್ಸ್‌; 7ಹಂತಗಳಲ್ಲಿ ನಡೆಯಲಿದೆ ಮತದಾನ..!

ಲೋಕ ಸಮರಕ್ಕೆ ದಿನಾಂಕ ಫಿಕ್ಸ್‌; 7ಹಂತಗಳಲ್ಲಿ ನಡೆಯಲಿದೆ ಮತದಾನ..!

ನವದೆಹಲಿ; ದೇಶದೆಲ್ಲೆಡೆ ಲೋಕ ಸಭೆ ಚುನಾವಣೆ ಭರಾಟೆ ಜೋರಾಗಿದೆ. ಈ ಕುರಿತು ಚುನಾವಣೆ ಆಯೋಗ ಪತ್ರಿಕಾಗೋಷ್ಠಿ ನಡೆಸಿದೆ. 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಏಪ್ರಿಲ್‌ 19 ರಂದು ಮೊದಲ ಹಂತದ ಚುನಾವಣೆ, ಏಪ್ರೀಲ್‌ 26 ಎರಡನೇ ಹಂತ, ಮೇ 07 ಮೂರನೇ, ಮೇ 13, ನಾಲ್ಕನೇ ಹಂತ, ಮೇ 20 ಐದನೇ ಹಂತ , 25 ಮೇ ಆರನೇ ಹಂತ, ಜೂನ್ 1ರಂದು 7ನೇ ಹಂತದ ಮತದಾನ ನಡೆಯಲಿದೆ.


ಕರ್ನಾಟಕದಲ್ಲಿ ಎರಡು ಹಂತದಲ್ಲಿ 26 ರಂದು ಮೊದಲ ಹಂತ, ಮೇ07 ಎರಡನೇ ಹಂತದ ಚುನಾವಣೆ ನಡೆಯಲಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದ್ರೆ ಉಳಿದ 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್‌ ನಾಲ್ಕುರಂದು ಘೋಷಣೆಯಾಗಲಿದೆ ಎಂದು ಚುನಾವಣೆ ಆಯುಕ್ತರಾದ ರಾಜೀವ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ,ಅಷ್ಟೇ ಅಲ್ಲದೇ ಲೋಕ ಸಭೆ ಚುನಾವಣೆಗೆ ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಲೋಕಸಭೆ ಚುನಾವಣೆಯ ಷರತ್ತುಗಳು ಹೀಗಿವೆ..
*ಮತಗಟ್ಟೆಯಲ್ಲಿ ಹಿಂಸಾಚಾರ ನಡೆದರೆ ಜಾಮೀನು ರಹಿತ ಕೇಸ್‌ ದಾಖಲು*
*ಸೋಷಿಯಲ್‌ ಮೀಡಿಯಾಗಳ ಮೇಲೆ ನಿಗಾ*
*ದಿವ್ಯಾಂಗರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ*

*ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡರೆ ಕ್ರಮ
*ದೇವಸ್ಥಾನ, ಮಸೀದಿ, ಚರ್ಚ್, ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ
*ಸಚಿವರು ಮತ್ತು ಶಾಸಕರು ಸರ್ಕಾರಿ ವೆಚ್ಚದಲ್ಲಿ ಚುನಾವಣಾ ರ್ಯಾಮಲಿ ನಡೆಸುವಂತಿಲ್ಲ.

ಇನ್ನು ದೇಶದಲ್ಲಿ 97 ಕೋಟಿ ಮತದಾರರಿದ್ದು, 10 ಲಕ್ಷದ 55 ಸಾವಿರ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಮತದಾನಕ್ಕಾಗಿ 55 ಲಕ್ಷ ಇವಿಎಂ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ ಎಂದರು.49.7 ಕೋಟಿ ಪುರುಷ ಹಾಗೂ 47.1 ಕೋಟಿ ಮಹಿಳಾ ಮತದಾರರಿದ್ದಾರೆ.19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!