Sunday, August 3, 2025
!-- afp header code starts here -->
Homeವಿಶೇಷಮೂಡಿಗೆರೆ: ರಾಜ್ಯ ಮಟ್ಟದಲ್ಲಿ ಜನಪ್ರಿಯತೆಗೊಂಡ ʼಕ್ಯಾಂಟೀನ್ ಹೆಸರಿಲ್ಲʼ ಕ್ಯಾಂಟೀನ್!

ಮೂಡಿಗೆರೆ: ರಾಜ್ಯ ಮಟ್ಟದಲ್ಲಿ ಜನಪ್ರಿಯತೆಗೊಂಡ ʼಕ್ಯಾಂಟೀನ್ ಹೆಸರಿಲ್ಲʼ ಕ್ಯಾಂಟೀನ್!

ಮೂಡಿಗೆರೆ: ರಾಜ್ಯ ಮಟ್ಟದಲ್ಲಿ ಜನಪ್ರಿಯತೆಗೊಂಡ ಕ್ಯಾಂಟೀನ್. ಹೆಸರೇ… ಕ್ಯಾಂಟೀನ್ ಹೆಸರಿಲ್ಲ. ಅಯ್ಯೋ ಇದೇನಪ್ಪ ಹೇಸರಿಲ್ಲದ ಕ್ಯಾಂಟೀನ್ ಅಂತೀರಾ ಕನ್ಫ್ಯೂಸ್ ಆಗ್ಬೇಡಿ ಈ ಕ್ಯಾಂಟೀನ್ ಹೆಸರರೇ.. ಕ್ಯಾಂಟೀನ್ ಹೆಸರಿಲ್ಲ.ಆಶ್ಚರ್ಯ ಆದ್ರೂ ಆದರೆ ಇದು ಸತ್ಯ.ಇದೇನಪ್ಪ ಈ ಕ್ಯಾಂಟೀನ್ಗೆ ಹೆಸರನ್ನ ಹೀಗಿಟ್ಟಿದ್ದಾರೆ ಅಂತ ಆಶ್ಚರ್ಯದಿಂದ ನೋಡ್ತಿರಾ ಕ್ಯಾಂಟೀನ್ ಮಾಲೀಕ ಅಶೋಕ್ ಶೆಟ್ರು ಇದರ ಬಗ್ಗೆ ಮಾತನಾಡಿದ್ದಾರೆ.‌

ಹೌದು..ಇದು ಇರೋದು ನಮ್ಮ ಮೂಡಿಗೆರೆಯ ಬೈದುವಳ್ಳಿ ಕ್ರಾಸ್ ಅಥವಾ ಜಂಕ್ಷನ್ ನಲ್ಲಿ.ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಈ ಕ್ಯಾಂಟೀನ್ ಪ್ರವಾಸಿಗರು ಹಾಗೂ ಸ್ಥಳೀಯರಿಗೂ ಅಚ್ಚುಮೆಚ್ಚು. ತನ್ನ ಹೆಸರಿಂದಲೇ ಜನ ಮನ ಗೆದ್ದ ಕ್ಯಾಂಟೀನ್. ಇಡಿ ರಾಜ್ಯದಲ್ಲೇ ಹೆಸರು ಪಡೆದಿದೆ ಎಂದರೆ ನಂಬಲೇಬೇಕು.ಇಲ್ಲಿ ಸಿಗುವ ಕಾಫಿ, ಟೀ, ಮಲ್ನಾಡ್ ಬನ್ಸ್, ಅಬ್ಬಾಬ್ಬಾ ಅದೆಂತ ರುಚಿ ವಾವ್ ಸೂಪರ್ ಅಂತಾರೆ ಗ್ರಾಹಕರು.

ಬಾಂಬೆ, ಗುಜರಾತ್, ಬೆಂಗಳೂರು, ಕೋಲ್ಕತ್ತಾ ಗಳಂತ ಮಹಾನಗರಿಯಲ್ಲಿ ಹೋಟೆಲ್ ಉದ್ಯಮ ನಡೆಸಿ ವ್ಯಾಪಾರ ಕ್ಷೇತ್ರದಲ್ಲಿ ಸೋಲನ್ನು ಕಂಡು ಬೇರೆ ಕಡೆ ಸಂಬಳಕ್ಕೆ ಕೆಲಸ ಮಾಡುತಿದ್ದ ಶೆಟ್ರು ಬದುಕಿನಲ್ಲಿ ಸೋತೆ ಎಂದು ಬೇಜಾರು ಮಾಡಿಕೊಂಡು ಚಿಂತಿಸುತ್ತ ತಲೆಕೆಟ್ಟು ಕೂತಾಗ ಮತ್ತೆ ಏನಾದ್ರೂ ಸ್ವಂತ ವ್ಯಾಪಾರ ಮಾಡೋ ಆಸೆಯಿಂದ ಹಲವು ಆಲೋಚನೆ ಮಾಡಿದಾಗ ಹೊಳೆದಿದ್ದೆ ನನ್ನ ಸ್ವಂತ ಊರಿಗೆ ಹೋಗಿ ಕ್ಯಾಂಟೀನ್ಮಾಡೋ ಆಸೆ ಆದರೆ ಬರೀಗೈ ಆದ ಅವರು ಹಣಕ್ಕಾಗಿ ಮತ್ತಷ್ಟು ತಲೆಕೆಡಿಸಿಕೊಂಡಾಗ ಕ್ಯಾಂಟಿನ್ ಆಸೆ ಜೀವಂತವಾಗಿಸಿದ್ದೇ ಮಡದಿ ಎನ್ನುತ್ತಾರೆ.

ಪತ್ನಿ ಸಹಕಾರ ನೆನೆದದು ಹಾಗೆ ಮುಂದುವರೆಯುತ್ತಾ, ಕ್ಯಾಂಟೀನ್ ಆಸೆ ಆರಂಭವಾದವು ಆದ್ರೆ ಹಣ ಅನ್ನೋ ವಿಘ್ನ ಕಾಡುತ್ತಲೆ ಇತ್ತು ಇಂತಹ ಸಂದರ್ಭದಲ್ಲಿ ಕೈ ಜೋಡಿಸಿದ ನಂಬಿಕೆ ಮೇಲೆ ಸಾಮಾಗ್ರಿಗಳನ್ನು ಸಾಲವಾಗಿ ಕೊಟ್ಟ ಕೆಲ ಮಾಲೀಕರನ್ನು ನೆನಪಿಸಿ ಕಣ್ಣೀರಿಟ್ಟರು. ನೋವು ನಲಿವು ಸಂತೋಷ ದುಃಖಗಳ ಮದ್ಯೆ ಆರಂಭವಾಗಿದ್ದೆ ಈ ಹೆಸರಿಲ್ಲ ಕ್ಯಾಂಟೀನ್ ಎಂದರು. ಹಾಗೆ ತಲೆಕೆಟ್ಟು ಹೊಳೆದ ಹೆಸರೇ ಕ್ಯಾಂಟೀನ್ ಹೆಸರಿಲ್ಲ ಎಂದು ಹೇಳಿದರು.

ತನ್ನನ್ನು ತಾನು ದೇವರಿಗೆ ಚಾಲೆಂಜ್ ಹಾಕಿಕೊಂಡು ನೀ ಇದ್ದರೆ ದಡ ಮುಟ್ಟಿಸು ಇಲ್ಲವೇ ನನ್ನ ದಡ ನಾ ಸೇರುವೆ ಎಂದು ಅಂದು ಕೊಂಡು ಫೀಲ್ಡ್ ಇಳಿದ ಶೆಟ್ರು ಮೈ ತುಂಬಾ ಸಾಲ ಇದ್ರೂ ಎಲ್ಲವನ್ನು ತೀರಿಸಿ ಮೊನ್ನೆ ಮೊನ್ನೆ ಹೊಸ ಕಾರು ತಗೊಂಡೆ ಅಂತ ತನ್ನ ಯಶೋಗಾಥೇ ಯನ್ನು ಹೆಮ್ಮೆಯಿಂದ ಹಂಚಿಕೊಂಡರು.

ಮತ್ತಷ್ಟು ನಿಮ್ಮ ಬದುಕು ಎತ್ತರಕ್ಕೆ ಸಾಗಲಿ ಸೋತವರಿಗೆ ಸ್ಫೂರ್ತಿಯಾದ ನಿಮಗೆ All the best ದೇವ್ರು ಒಳ್ಳೇದು ಮಾಡಲಿ ಎಂದು ನಮ್ಮ ಈ ಪಬ್ಲಿಕ್‌ ಇಂಪ್ಯಾಕ್ಟ್‌ ಕೂಡ ಬಯಸುತ್ತದೆ.

ವಿಶೇಷ ವರದಿ: ಪುನೀತ್ ಕಡಿದಾಳ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!