ಮಲೆನಾಡ ರಂಗಕರ್ಮಿಗೆ ಒಲಿದ ʼಮಲಬಾರ್ ವಿಶ್ವರಂಗ ಪುರಸ್ಕಾರʼ
ಉಡುಪಿ; ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ನೀಡುವʼಮಲಬಾರ್ ವಿಶ್ವರಂಗ ಪುರಸ್ಕಾರ 2024ರ ಫಲಿತಾಂಶ ಪ್ರಕಟಿಸಲಾಗಿದ್ದು ಈ ಬಾರಿಯೂ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗ ಕರ್ಮಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಬಾರಿಯ `ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರತಿವರ್ಷ ರಾಜ್ಯ ಮತ್ತು ಅಂತಾರರಾಜ್ಯ ಕಲಾವಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದ್ದರು ಆದರೆ ಇದೆ ಮೊದಲ ಬಾರಿ ಮಲೆನಾಡ ಭಾಗದ ರಂಗಕರ್ಮಿಯಾಗಿರುವ ಶೃಂಗೇರಿಯ ರಮೇಶ್ ಬೇಗಾರ್ ರವರಿಗೆ ಪ್ರಶಸ್ತಿ ಒಲಿದಿರುವುದು ಇನ್ನಷ್ಟು ಸಂತಸ ಹೆಚ್ಚಿಸಿದೆ.

ರಮೇಶ್ ಬೇಗಾರ್ ರಂಗಭೂಮಿ, ಕಿರುತೆರೆ, ಯಕ್ಷಗಾನ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಇವರು ಮಲೆನಾಡ ಮೊದಲ ಮಳೆಗಾಲ ದ ಸಮ್ಮಿಶ್ರ ತೆಂಕು – ಬಡಗು ಯಕ್ಷಗಾನದಲ್ಲಿ ಬಣ್ಣ ಹಚ್ಚಿ 38 ವರ್ಷಗಳ ಸುದೀರ್ಘ ಬಿಡುವಿಲ್ಲದ ಸಾಂಸ್ಕೃತಿಕ ಪ್ರಯಾಣದಲ್ಲಿ ಮಲೆನಾಡನ್ನು ಮೆಚ್ಚುವಂತೆ ಸಾಧಕ ದಿಗ್ಗಜರಾಗಿ ಹೊರಹೊಮ್ಮಿದ್ದಾರೆ.
ಯಕ್ಷಗಾನ ಮಾತ್ರವಲ್ಲದೇ ರಂಗಭೂಮಿ ಕ್ಷೇತ್ರದಲ್ಲಿ 50 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಕಿರುತೆರೆಯಲ್ಲಿ 680 ಎಪಿಸೋಡ್ ನೀಡಿರುವ ಇವರು ಸಿನಿಮಾ ಕ್ಷೇತ್ರಕ್ಕೂ ಕೊಡುಗೆ ನೀಡಲು ಮುಂದಾಗಿದ್ದಾರೆ.

ಸದ್ಯ ಶೃಂಗೇರಿಯ ರಮೇಶ್ ಬೇಗಾರ್ ರವರ ಕಲಾ ಕ್ಷೇತ್ರದ ಕೊಡುಗೆಗೆ ಜಿಲ್ಲಾ ರಾಜ್ಯೋತ್ಸವ, ಆರ್ಯಭಟ, ಕಲಾಶ್ರೀ, ಚಾಮುಂಡೇಶ್ವರಿ, ಕಲಸಂಪದ ಮತ್ತು ಕತಾರ್ ದೇಶದ ಕನ್ನಡ ಸಂಘದ ಪ್ರಶಸ್ತಿಗಳು ಒಲಿದು ಬಂದಿದೆ. ಇನ್ನು ಮಾರ್ಚ್ 26 ರಂದು ಮಲಬಾರ್ ವಿಶ್ವ ರಂಗ ಪುರಸ್ಕಾರ ಉಡುಪಿಯಲ್ಲಿ ಪ್ರದಾನವಾಗಲಿದೆ.