ಚಿಕ್ಕಮಗಳೂರು: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬ ಸಂಭ್ರಮ ಮನೆ ಮಾಡಿದ್ದು ಗಣೇಶ ಚತುರ್ಥಿ ಮುನ್ನ ದಿನ ಗೌರಿ ಹಬ್ಬವನ್ನು ಆಚರಿಸುವ ಈ ದಿನ ಗಣೇಶನ ತಾಯಿಯಾದ ಪಾರ್ವತಿ ದೇವಿಯು ಗೌರಿಯ ರೂಪ ತೆಗೆದುಕೊಂಡು ದೇವಿಯ ರೂಪದಲ್ಲಿ ಭೂಮಿಗೆ ಆಗಮಿಸುತ್ತಾಳೆ ಎಂಬುದು ನಂಬಿಕೆಯಾಗಿದೆ. ಮಲೆನಾಡಿನಲ್ಲಿ ಗೌರಿ ಹಬ್ಬದ ಸಂದರ್ಭದಲ್ಲಿ ಮಾತ್ರ ಅರಳುವ ಈ ಹೂವು ವಿಶೇಷ ಹೂವಿನೊಂದಿಗೆ ಮಂಗಳಗೌರಿಗೆ ಪೂಜೆಯ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಹೌದು ಪಶ್ಚಿಮ ಘಟ್ಟದ ದಟ್ಟ ಕಾಡಿನ ಪೊದೆಯಲ್ಲಿ ಕಂಡು ಬರುವ ಕಡು ಕೇಸರಿ ಬಣ್ಣದ ಅಗ್ನಿಶಿಕೆ ಅಂತ ಅರಳಿರುವ ಅಪರೂಪದ ಗೌರಿ ಹೂ. ಈಗ ಮಲೆನಾಡಿನ ಮನೆಗಳಲ್ಲಿ ಚೌತಿ ಹಬ್ಬದ ಮಂಗಳ ಗೌರಿ ಮುಡಿಗೇರಿದೆ. ಮಲೆನಾಡಿನ ಸಂಸ್ಕೃತಿಯಲ್ಲಿ ಗೌರಿ ಪೂಜೆಯ ಅವಿಭಾಜ್ಯ ಅಂಗವೇ ಈ ಹೂವು ಮನೆಯಲ್ಲಿ ಇಟ್ಟು ಹೆಣ್ಣು ಮಕ್ಕಳು ಗೌರಿಯನ್ನು ಆರಾಧಿಸುತ್ತಿದ್ದಾರೆ. ಅಪರೂಪದ ಹೂವನ್ನು ಹಿರಿಯರು ಕಾಡಿಗೆ ಹೋಗಿ ತರುವ ಪದ್ಧತಿ ಇಂದಿಗೂ ಜೀವಂತವಿದೆ.
ಈ ಸಸ್ಯದಲ್ಲಿ ಅರಳುವ ಆರು ದಳಗಳ ಅಪರೂಪದ ಹೂವು ನೋಡುಗರ ಆಕರ್ಷಿಸುತ ಹಸಿರು ಹಳದಿ ಬಣ್ಣದ ಮೊಗ್ಗು ಬಳಿಕ ಕೆಂಪು ಕೇಸರಿ ಬಣ್ಣಕ್ಕೆ ತಿರುಗಿ ಬೆಂಕಿಯ ಕೆನ್ನಾಲಗೆಯಂತೆ ಹೊಳಪು ಹೊರಡುತ್ತದೆ. ಅದಕ್ಕಾಗಿ ಮಲೆನಾಡಿನಲ್ಲಿ ಹೂವನ್ನು ಅಗ್ನಿಶಿಕೆ, ಹುಲಿ ಪಂಜ, ಕೋಳಿ ಜುಟ್ಟಿನ ಹೂವು ಎಂದು ಸಹ ಕರೆಯುತ್ತಾರೆ.
ಒಟ್ಟಿನಲ್ಲಿ ಗೌರಿ ಹಬ್ಬದ ಪ್ರಮುಖ ಪಾತ್ರ ವಹಿಸಿರುವ ಈ ಗೌರಿ ಹೂವಿನ ಗಿಡ ಈಗ ವಿನಾಶದ ಅಂಚಿಗೆ ತಲುಪಿದ್ದು ಇಂದಿನ ಯುವ ಪೀಳಿಗೆ ಇದರ ಪರಿಚಯ ಇಲ್ಲದಂತಾಗಿದೆ ಹೀಗಾಗಿ ಇಂತಹ ಅಪರೂಪದ ಗಿಡಗಳ ರಕ್ಷಣೆ ಅಗತ್ಯವಾಗಿದೆ ಎಂದು ಮಲೆನಾಡಿಗರು ಅಭಿಪ್ರಾಯ ಪಟ್ಟಿದ್ದಾರೆ
