Monday, August 4, 2025
!-- afp header code starts here -->
Homeವಿಶೇಷಅತ್ತೆ ಜೊತೆ ಅಳಿಯನ ರಾಸಲೀಲೆ : ಇಬ್ಬರಿಗೂ ಮದುವೆ ಮಾಡಿಸಿದ ಮಾವ..!

ಅತ್ತೆ ಜೊತೆ ಅಳಿಯನ ರಾಸಲೀಲೆ : ಇಬ್ಬರಿಗೂ ಮದುವೆ ಮಾಡಿಸಿದ ಮಾವ..!

ಇದೊಂದು ಅಪರೂಪದ ಮದುವೆ.ಈ ಮದುವೆ ನಡೆದಿರೋದು ಬಿಹಾರದಲ್ಲಿ .ಇಬ್ಬರು ಮಕ್ಕಳ ತಂದೆಯಾಗಿದ್ದ 45 ವರ್ಷದ ಸಿಕಂದರ್ ಯಾದವ್, ಪತ್ನಿಯ ಮರಣದ ನಂತರ ಮಕ್ಕಳ ಜೊತೆ ಅತ್ತೆ-ಮಾವನೊಂದಿಗೆ ಬಂದು ವಾಸಿಸುತ್ತಿದ್ದ .ಒಂದೇ ಮನೆಯಲ್ಲೇ ವಾಸವಿದ್ದುದರಿಂದ 55 ವರ್ಷದ ಅತ್ತೆ ಗೀತಾ ದೇವಿ ಮೇಲೆ 45 ವರ್ಷದ ಸಿಕಂದರ್ ಯಾದವ್ ಅಳಿಯನಿಗೆ  ಪ್ರೇಮಾ೦ಕುರವಾಗಿದೆ. ಇಬ್ಬರ ನಡುವೆ ಸಲುಗೆ ಬೆಳೆದು ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರು. ಗೀತಾ ದೇವಿಯ ಪತಿ ದಿಲೇಶ್ವರ್ ದರ್ವೆ ಅವರಿಬ್ಬರ ಮೇಲೆ ಅನುಮಾನಗೊಂಡು, ಇಬ್ಬರನ್ನು ಒಂದು ದಿನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈ ಅಸಾಂಪ್ರದಾಯಿಕ ಪ್ರೇಮಕಥೆಯನ್ನು ದಿಲೇಶ್ವರ್ ದರ್ವೆ ಗ್ರಾಮ ಪಂಚಾಯಿತಿ ಗಮನಕ್ಕೆ ತ೦ದಿದ್ದಾನೆ . ಈ ವೇಳೆ ಸಿಕಂದರ್ ಯಾದವ್  ತನ್ನ ಅತ್ತೆಯ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಮಾವನ ಒಪ್ಪಿಗೆಯ ಮೇರೆಗೆ, ಗ್ರಾಮಸ್ಥರು , ಇಬ್ಬರಿಗೂ ಕಾನೂನು ಪ್ರಕಾರ ಮದುವೆ ಮಾಡಿಸಿದ್ದಾರೆ. ಈ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್  ವೈರಲ್ ಆಗಿದೆ.

ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಯಾದವ್ , ಗ್ರಾಮಸ್ಥರ ಸಮ್ಮುಖದಲ್ಲಿ  ಅತ್ತೆ ಗೀತಾ ದೇವಿ ಹಣೆಗೆ ಕು೦ಕುಮ ಹಚ್ಚುವುದನ್ನು ಕಾಣಬಹುದು. ಅಲ್ಲದೇ ಇಬ್ಬರ ಈ  ಅಪರೂಪದ ಮದುವೆ ವೇಳೆ ಗ್ರಾಮಸ್ಥರು ಹರ್ಷೋದ್ಗಾರ ಮಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಈ ಬಗ್ಗೆ ಮಾತನಾಡಿದ ಮಾವ ದಿಲೇಶ್ವರ್ ದರ್ವೆ, ನಾನೇ ಸಂತೋಷದಿಂದ ಮದುವೆಗೆ ಒಪ್ಪಿಗೆ ನೀಡಿದ್ದೇನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!