ಕುಕ್ಕೆ ಸುಬ್ರಮಣ್ಯಕ್ಕೆ ಕುಟುಂಬ ಸಮೇತರಾಗಿ ನಟಿ ಮಾಲಾಶ್ರೀ ಭೇಟಿ
Actress Malashree; ಕುಕ್ಕೆ ಸುಬ್ರಮಣ್ಯಕ್ಕೆ ನಟಿ ಮಾಲಾಶ್ರೀ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಇಂದು ಬೆಳಗ್ಗೆ ಭೇಟಿ ನೀಡಿದ ಅವರು ದೇವರ ದರ್ಶನ ಪಡೆದರು.

ಮಗಳು ಆರಾಧನಾ ಅವರ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಂಡ ಬೆನ್ನಲ್ಲೇ ಮಾಲಾಶ್ರೀ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.ಈ ಸಂದರ್ಭದಲ್ಲಿ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮಾಲಾಶ್ರೀ ಅವರನ್ನು ಶಾಲು ಹೊದಿಸಿ ಗೌರವಿಸಿದ್ರು.
ಇದೇ ಸಂದರ್ಭದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ, ಮಗ ಆರ್ಯನ್ ಜೊತೆಗಿದ್ದರು.
