Tuesday, August 5, 2025
!-- afp header code starts here -->
Homeಆಧ್ಯಾತ್ಮಮುಂಜಾನೆ ಸೂರ್ಯನ ಬೆಳಕಿನಲ್ಲಿ 30 ನಿಮಿಷ ವಾಕ್‌ ಮಾಡುವುದರಿಂದ ಏನೆಲ್ಲ ಲಾಭ ಇದೆ ಗೊತ್ತಾ..?

ಮುಂಜಾನೆ ಸೂರ್ಯನ ಬೆಳಕಿನಲ್ಲಿ 30 ನಿಮಿಷ ವಾಕ್‌ ಮಾಡುವುದರಿಂದ ಏನೆಲ್ಲ ಲಾಭ ಇದೆ ಗೊತ್ತಾ..?

ಪ್ರತಿದಿನ ಬೆಳಗ್ಗೆ ಬೇಗ ಎದ್ದು ಸೂರ್ಯನ ಬಿಸಿಲಿಗೆ ಮೈವೊಡ್ಡುತ್ತಾ ವಾಕಿಂಗ್ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಅದರ ಜೊತೆಗೆ ದೇಹದ ತೂಕವನ್ನು ಸಮತೋಲನವಾಗಿರಿಸಲು ಸಹಾಯ ಮಾಡುತ್ತದೆ. ನಮ್ಮಲ್ಲಿ ಹಲವರು ಪ್ರತಿ ದಿನ ವಾಕಿಂಗ್‌ ಮಾಡಲು ಇಷ್ಟಪಡುವುದಿಲ್ಲ. ಆದರೆ ವೈದ್ಯರ ಪ್ರಕಾರ ಸೂರ್ಯನ ಬೆಳಕಿನಿಂದ ದಿನವನ್ನು ಪ್ರಾರಂಭಿಸುವುದರಿಂದ ಆರೋಗ್ಯ ಚೆನ್ನಾಗಿರುವುದರ ಜೊತೆಗೆ ಇಡೀ ದಿನವನ್ನ ಉಲ್ಲಾಸದಿಂದ ಕಳೆಯಬಹುದು.
ನಿಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ವಿಟಮಿನ್ ಡಿ ಅವಶ್ಯಕತೆ ಬಹಳ ಮುಖ್ಯವಾಗುತ್ತೆ ಆದ್ದರಿಂದ ಪ್ರತಿದಿನ ಬೆಳಗ್ಗೆ 15 ರಿಂದ 30 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದರ ಜೊತೆಗೆ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಅನ್ನು ಪೂರೈಸುತ್ತದೆ. ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.
ಸೂರ್ಯನ ಬೆಳಕು ಸಂತೋಷವನ್ನು ಹೆಚ್ಚಿಸುವ ಸಿರೊಟೋನಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಸೂರ್ಯನ ಬೆಳಕಿನಿಂದ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ಆತಂಕ ಮತ್ತು ಖಿನ್ನತೆಯ ಭಾವನೆಗಳು ಕಡಿಮೆಯಾಗುತ್ತದೆ. ಸೂರ್ಯನ ಬೆಳಗಿನ ಕಿರಣಗಳು ನಿಮ್ಮ ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದ ನಾವು ಪ್ರತಿದಿನ ಬೆಳಗ್ಗೆ ಸೂರ್ಯನ ಕಿರಣಗಳ ಜೊತೆ ಕೆಲವು ನಿಮಿಷಗಳನ್ನು ಕಳೆಯಬೇಕು.
ಪ್ರತಿದಿನ 30 ನಿಮಿಷದ ವಾಕಿಂಗ್‌ ಮಾಡುವುದರಿಂದ ನಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!