Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಚಿಕ್ಕಮಗಳೂರು: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

ಚಿಕ್ಕಮಗಳೂರು: ಭಾರತ ಮಹಿಳಾ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಚಿಕ್ಕಮಗಳೂರು ಮೂಲದ ವೇದಾ ಕೃಷ್ಣಮೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.

ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ಪಟ್ಟಣದ ಹುಡುಗಿಯಿಂದ ಹಿಡಿದು ಹೆಮ್ಮೆಯಿಂದ ಭಾರತದ ಜೆರ್ಸಿಯನ್ನು ಧರಿಸಿದ್ದೇನೆ. ನನಗೆ ಪಾಠಗಳನ್ನು, ಜನರನ್ನು, ನೆನಪುಗಳನ್ನು ನೀಡಿದ ಕ್ರಿಕೆಟಿಗೆ ಕೃತಜ್ಞಳಾಗಿದ್ದೇನೆ. ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ, ಆದರೆ ಆಟಕ್ಕೆ ಅಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಚಿಕ್ಕಮಗಳೂರಿನ ಕಡೂರಿನಲ್ಲಿ 1992ರ ಅಕ್ಟೋಬರ್‌ 16 ರಂದು ಜನಿಸಿದ ವೇದಾ ಇಲ್ಲಿಯವರೆಗೆ 48 ಏಕದಿನ ಪಂದ್ಯಗಳ 41 ಇನ್ನಿಂಗ್ಸ್‌ಗಳಿಂದ 829 ರನ್‌ ಹೊಡೆದಿದ್ದಾರೆ. 76 ಟಿ20 ಪಂದ್ಯಗಳ 63 ಇನ್ನಿಂಗ್ಸ್‌ಗಳಿಂದ 875 ರನ್‌ ಹೊಡೆದಿದ್ದಾರೆ. ಆಸ್ಪ್ರೇಲಿಯಾದ ಪ್ರತಿಷ್ಟಿತ ಕ್ಲಬ್ ಲೀಗ್ ಬಿಗ್ ಬ್ಯಾಷ್‌ನಲ್ಲಿ ಆಡಿದ್ದರು.

2011 ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ್ದ ವೇದಾ 2018 ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಕೊನೆಯ ಏಕದಿನವಾಡಿದ್ದರು.

2011 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವಾಡಿದ್ದ ವೇದಾ ಕೃಷ್ಣಮೂರ್ತಿ 2020 ರಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾ ಪರ ಆಡಿದ್ದರು. ಈ ಪಂದ್ಯವೇ ಇವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!