Tuesday, February 10, 2026
Homeಸ್ಪೋರ್ಟ್ಸ್Ind VS Pak: ಇಂದು ಭಾರತ- ಪಾಕ್ ಹೈವೋಲ್ಟೇಜ್ ಸೂಪರ್ 4 ಮ್ಯಾಚ್!

Ind VS Pak: ಇಂದು ಭಾರತ- ಪಾಕ್ ಹೈವೋಲ್ಟೇಜ್ ಸೂಪರ್ 4 ಮ್ಯಾಚ್!

ಏಷ್ಯಾಕಪ್‌ನಲ್ಲಿ ಭಾರತ- ಪಾಕ್ ಇಂದು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಇಂದು ಭಾರತ ಪಾಕ್ ನಡುವೆ ಹೈವೋಲ್ಟೇಜ್ ಸೂಪರ್ 4 ಮ್ಯಾಚ್ ನಡೆಯಲಿದೆ. ಕಳೆದ ಬಾರಿ ಭಾರೀ ಹೈಡ್ರಾಮಕ್ಕೆ ಕಾರಣವಾಗಿದ್ದ ದುಬೈ ಕ್ರೀಡಾಂಗಣದಲ್ಲೇ ಮತ್ತೆ ಭಾರತ-ಪಾಕ್ ಸೆಣಸಾಡಲಿದೆ. ಈ ಪಂದ್ಯಕ್ಕೂ ಮ್ಯಾಚ್ ರೆಫರಿಯಾಗಿ ಆ್ಯಂಡಿ ಪೈಕ್ರಾಫ್ಟ್ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯವು ಆಟಗಾರರ ಫಿಟ್ನೆಸ್ ಪರೀಕ್ಷೆಯಾಗಲಿದೆ, ಏಕೆಂದರೆ ಯುಎಇಯ ಬಿಸಿಲಿನ ತಾಪದಲ್ಲಿ ಆಡುವುದು ಯಾವುದೇ ಆಟಗಾರನಿಗೆ ಸುಲಭದ ಕೆಲಸವಲ್ಲ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 36 ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ಏರಿಳಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಕ್ಯೂವೆದರ್ ವರದಿ ಮಾಡಿದೆ, ಇದು ಪಂದ್ಯ ಮುಂದುವರೆದಂತೆ ಕಡಿಮೆಯಾಗುವ ಸಾಧ್ಯತೆಯಿದೆ. ಆಟಗಾರರಿಗೆ ದೊಡ್ಡ ಸವಾಲೆಂದರೆ ಆರ್ದ್ರತೆ, ಇದು ಶೇಕಡಾ 50 ರವರೆಗೆ ತಲುಪಬಹುದು.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕ್ರಿಕೆಟ್ ಮೂಲಕವೂ ಪ್ರತಿಕಾರ ತೀರಿಸಿಕೊಂಡ ಭಾರತ, ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದೇ ಜಗತ್ತಿನ ಮುಂದೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿತ್ತು. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿ ಅವಮಾನಕ್ಕೀಡಾಗಿತ್ತು. ಐಸಿಸಿ ನಿಯಮಗಳನ್ನ ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ. ಭಾರತದ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಐಸಿಸಿಗೆ ದೂರು ನೀಡಿತ್ತು. ಎಲ್ಲಾ ಕಡೆಯಿಂದಲೂ ಪಾಕ್‌ಗೆ ಅವಮಾನವಾಗಿತ್ತು. ಇದೀಗ ಭಾರತದ ವಿರುದ್ಧ ಗೆದ್ದು ಬೀಗಲು ಸರ್ವಪ್ರಯತ್ನ ಮಾಡುತ್ತಿದೆ. ಆದರೆ ಭಾರತ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ತಯಾರಿ ನಡೆಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!