ಐಪಿಎಲ್ ಸೀಸನ್ 17ರಲ್ಲಿ RCBಯ ಹೀನಾಯ ಸೋಲಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಕಾರಣ ಅಂತ ಕೆಲ ದಿನಗಳ ಹಿಂದೆ ಗಜಪಡೆ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅವಮಾನಿಸಿ, ಅವಹೇಳನಕಾರಿಯಾಗಿ ಟ್ವೀಟ್ ಮಾಡಲಾಗಿತ್ತು. ಶುಭಕಾರ್ಯಕ್ಕೆ ಮುತೈದೆಯರನ್ನು ಕರೆಯಬೇಕು, ಗಂಡ ಸತ್ತ .. ನ್ನು ಕರೆಯಬಾರದು ಎಂಬ ಪೋಸ್ಟ್ ಸಖತ್ ವೈರಲ್ ಆಗಿತ್ತು. ಆದರೆ ಇದಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಏನು ಉತ್ತರ ಕೊಡದೆ, ಮೌನಕ್ಕೆ ಶರಣಾಗಿದ್ದರು .ಆದ್ರೀಗ ಮತ್ತೆ ಅಶ್ವಿನಿ ಪುನೀತ್ ರಾಜಕುಮಾರ್ ಟ್ರೆಂಡಿಂಗ್ ನಲ್ಲಿದ್ದಾರೆ .ಇದಕ್ಕೆ ಕಾರಣ RCB ಪ್ಲೇ ಆಫ್ ಗೆ ಪ್ರವೇಶ ಪಡೆದಿರುವುದು.
ಅಶ್ವಿನಿ ನಮ್ಮ ಅದೃಷ್ಟ ದೇವತೆ, ಅಪಶಕುನ ಅಲ್ಲ , ಶುಭಶಕುನ ಕಣ್ರೋ , ದೊಡ್ಮನೆ ಸೊಸೆ ದೇವರಂತವರು, ಅವರಿಂದಾನೆ RCB ಪ್ಲೇ ಆಫ್ ಗೆ ಪ್ರವೇಶ ಪಡೆಯುವಂತಾಯ್ತು ಅಂತ ನೆಟ್ಟಿಗರು ಪೋಸ್ಟ್ ಮಾಡ್ತಿದ್ದಾರೆ. ಹಾಗೆ ಒಬ್ಬ ಹೆಣ್ಣಿನ ಬಗ್ಗೆ ಕೊ೦ಕು ಮಾತನಾಡಿದವರಿಗೆ, ಅಸಹ್ಯವಾಗಿ ಯೋಚಿಸಿದವರಿಗೆ ಸರಿಯಾಗೇ ಉತ್ತರ ಕೊಟ್ಟಂತಾಗಿದೆ ಅಂತ ಅಪ್ಪು ಫ್ಯಾನ್ಸ್ ಸರಿಯಾಗೇ ಚಾಟಿ ಬಿಸುತ್ತಿದ್ದಾರೆ
ಶನಿವಾರ RCB ವರ್ಸಸ್ CSK ಯ ಹೈ ವೋಲ್ಟೇಜ್ ಪಂದ್ಯದಲ್ಲಿ RCB , CSK ತಂಡವನ್ನು ಮಣಿಸಿ, ಅದ್ದೂರಿಯಾಗಿ ಪ್ಲೇ ಆಫ್ ಗೆ ಪ್ರವೇಶ ಪಡೆದು, ಅಗ್ರ ನಾಲ್ಕನೇ ಸ್ಥಾನದಲ್ಲಿದೆ. ಇದನ್ನು ನೋಡಿ ಅಭಿಮಾನಿಗಳ ಖುಷಿಯಂತು ಹೇಳತೀರದ್ದಾಗಿದೆ. ಈ ಸಲ ಕಪ್ ನಮ್ದೇ ಅಂತ ಅಭಿಮಾನಿಗಳು ಬೀಗುತ್ತಿದ್ದಾರೆ. ಅಲ್ಲದೆ ಐಪಿಎಲ್ ಸೀಸನ್ 17ರಲ್ಲಿ RCB ಯ ಹೊಸ ಅಧ್ಯಾಯ ಶುರುವಾಗಿದೆ ಅಂತ ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಐಪಿಎಲ್ ಪ್ರಾರಂಭವಾಗೋಕೂ ಮುನ್ನ RCB ಜೆರ್ಸಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೆ ಕಾರಣಕ್ಕೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ, ವಿವಾದವಾದಾಗ ಡಿಲೀಟ್ ಮಾಡಿದ್ದರು