ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್‌ನ ಪ್ರಮುಖ ಅಂಶಗಳ ಅಪ್ಡೇಟ್ಸ್ ಇಲ್ಲಿದೆ ನೋಡಿ…
11 ಗಂಟೆಗೆ ಸರಿಯಾಗಿ ಬಜೆಟ್ ಮಂಡನೆಗೆ ಮುಂದಾದ ನಿರ್ಮಲಾ ಸೀತಾರಾಮನ್
ಮಂಡನೆ ಆರಂಭವಾಗುತ್ತಿದ್ದಂತೆ ವಿಪಕ್ಷಗಳ ಗದ್ದಲ. ಗದ್ದಲದ ನಡುವೆ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್. ಐದು ಅಂಶಗಳನ್ನು ಆಧರಿಸಿದ ಬಜೆಟ್ ಮಂಡನೆ ಎಂದ ಹಣಕಾಸು ಸಚಿವೆ.
ವಿಕಸಿತ ಭಾರತದ ಸ್ಪೂರ್ತಿಯೊಂದಿಗೆ ಬಜೆಟ್ . ಮೋದಿ ನಾಯಕತ್ವದಲ್ಲಿ ದೇಶ ಸದೃಢವಾಗ ಬೆಳೆದಿದೆ. ಆಹಾರ ಭದ್ರತೆ, ಬಡವರು, ಯುವಕರು, ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಸಲದ ಬಜೆಟ್ ಎಂದ ನಿರ್ಮಲಾ ಸೀತಾರಾಮನ್.
ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ ಘೋಷಣೆ. ರಾಜ್ಯಗಳ ಸಹಭಾಗಿತ್ವದಲ್ಲಿ ಯೋಜನೆ ಜಾರಿ.
೧೦೦ ಜಿಲ್ಲೆಗಳಲ್ಲಿ ಕಡಿಮೆ ಇಳುವರಿಯ ರೈತರ ಸಬಲೀಕರಣಕ್ಕೆ ಯೋಜನೆ. ಪಂಚಾಯಿತಿ ಮಟ್ಟದಲ್ಲಿ ಧಾನ್ಯ ಸಂಸ್ಕರಣೆಗೆ ಉತ್ತೇಜನ.
ರೈತರ ಉತ್ಪಾದನಾ ಸಹಕಾರ ಸಂಘಗಳ ರಚನೆ. ತಾವರೆ ಬೀಜ ಕೃಷಿಗೆ ಹೆಚ್ಚಿನ ಉತ್ತೇಜನ.
ಮೀನುಗಾರಿಕೆ ವಲಯಕ್ಕೆ ೬೦ ಸಾವಿರ ಕೋಟಿ ರೂ ಅನುದಾನ. ಲಕ್ಷದ್ವೀಪ, ಅಂಡಮಾನ್ ನಿಕೋಬಾರ್‌ನಲ್ಲಿ ಮೀನುಗಾರಿಕೆಗೆ ಉತ್ತೇಜನ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ ೩ರಿಂದ ೫ ಲಕ್ಷಕ್ಕೆ ಏರಿಕೆ.
೧.೫ ಲಕ್ಷ ಇಂಡಿಯಾ ಪೋಸ್ಟ್ ಬ್ಯಾಂಕ್‌ಗಳ ಆರಂಭ. ಅಂಚೆ ಕಚೇರಿಗಳಲ್ಲಿ ಸರಕು ಸಾಗಣೆ.ಕುಶಲಕರ್ಮಿಗಳ ವಸ್ತುಗಳ ಸಾಗಣೆಗೆ ಹೆಚ್ಚಿನ ಆದ್ಯತೆ.
ಎಸ್‌ಸಿ, ಎಸ್‌ಟಿ ಉದ್ಯಮ ಪ್ರೋತ್ಸಾವಕ್ಕೆ ೨ ಕೋಟಿವರೆಗೂ ಸಾಲ ಪಡೆಯಲು ಅವಕಾಸ.ಸಣ್ಣ ಕೈಗಾರಿಕೆಗಳ ೫ ಲಕ್ಷ
ಆಹಾರ ಸಂರಕ್ಷಣೆ ಕ್ಷೇತ್ರದಲ್ಲಿ ಬಿಹಾರಕ್ಕೆ ವಿಶೇಷ ಅನುದಾನ.
೧ ಕೋಟಿ ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ. ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ಪೂರೈಕೆ
ಸರ್ಕಾರಿ ಆಸ್ಪತ್ರೆ, ಶಾಲೆಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ.
ಐಐಟಿ ಸೀಟ್‌ಗಳ ಸಾಮರ್ಥ್ಯ ಹೆಚ್ಚಳ. ೧೦ ವರ್ಷದಲ್ಲಿ ೩.೫ ಲಕ್ಷ ಸೀಟ್‌ಗಳ ಹೆಚ್ಚಳ.
ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ಆರಂಭ.
ಭಾರತದಲ್ಲೇ ಆಟಿಕೆಗಳ ಉತ್ಪಾದನೆಗೆ ಆದ್ಯತೆ.
ಶಾಲೆಗಳಲ್ಲಿ ಅಟಲ್ ಪ್ರಯೋಗಾಲಯ ಸ್ಥಾಪನೆ. ಎಐ ಅಭಿವೃದ್ಧಿಗೆ ಮೂರು ಹೊಸ ಕೇಂದ್ರಗಳ ಸ್ಥಾಪನೆ.
ಗ್ರಾಮೀಣ ಜನದ ಕುಡಿಯುವ ನೀರಿನ ಜಲಜೀವನ್ ಮಿಷನ್ ಯೋಜನೆ ೨೦೨೮ರವರೆಗೆ ಮುಂದುವರಿಕೆ.
ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚಿನ ಸಾಲ ಸೌಲಭ್ಯ.
ನಗರಾಭಿವೃದ್ಧಿಗೆ ವಿಶೇಷ ನಿಧಿ. ನಗರ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಳಕ್ಕೆ ಕ್ರಮ.
ವಿಕಸಿತ ಭಾರತಕ್ಕೆ ನ್ಯೂಕ್ಲಿಯರ್ ಎನರ್ಜಿ ಮಿಷನ್. ೨೦೪೭ರ ವೇಳೆಗೆ ಅಣು ವಿದ್ಯುತ್ ಉದ್ಪಾದನೆ ಹೆಚ್ಚಳ.
ಬಿಹಾರದಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಘೋಷಣೆ. ಪಾಟ್ನಾ ವಿಮಾನ ನಿಲ್ದಾಣ ವಿಸ್ತರಣೆ.
ಹಡಗುಗಳ ನಿರ್ಮಾಣ ಘಟಕಗಳ ಅಭಿವೃದ್ಧಿ.
ಖಾಸಗಿ ವಲಯಕ್ಕೆ ಪಿಎಂ ಗತಿಶಕ್ತಿ ಯೋಜನೆ.
೫೦ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ. ಹೊಸ ಉದ್ಯೋಗ ಸೃಷ್ಟಿಗೆ ಪ್ರವಾಸಿ ಕೇಂದ್ರಗಳಲ್ಲಿ ಒತ್ತು. ಹೋಂ ಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್.
ವೈದ್ಯಕೀಯ ವಲಯದ ಸಂಶೋದನೆಗೆ ೨೦ ಸಾವಿರ ಕೋಟಿ. ಮುಂದಿನ ೫ ವರ್ಷದಲ್ಲಿ ೧೦ ಸಾವಿರ ಫೇಲೋಶಿಪ್. ಐಐಟಿ, ಐಐಎಸ್‌ಸಿಗಳಲ್ಲಿ ಸಂಶೋಧನೆಗೆ ಫೇಲೋಶಿಪ್.
ಜ್ಞಾನ ಭಾರತ್ ಮಿಷನ್ ಮೂಲಕ ಐತಿಹಾಸಿಕ ಸಾಕ್ಷ್ಯಗಳ ಸಂಗ್ರಹ.
ಸ್ಥಳೀಯ ಇಲೆಕ್ಟ್ರಾನಿಕ್ ಉತ್ಪಾದನೆಗೆ ಒತ್ತು. ಯುವ ಸಮೂಹಕ್ಕೆ ಸಹಕಾರಿಯಾಗುವ ಇಲೆಕ್ಟ್ರಾನಿಕ್ ಉತ್ಪಾದನೆಗೆ ಆದ್ತೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ಬಿಲ್ ಮಂಡನೆ. ತೆರಿಗೆ ಪಾವತಿದಾರರಿಗೆ ಹಲವು ಯೋಜನೆ. ಬಜೆಟ್ ಭಾಷಣದಲ್ಲಿ ನಿರ್ಮಲಾ ಪ್ರಸ್ತಾಪ.
ಗ್ರಾಮೀಣ ಭಾಗದಲ್ಲಿ ಪೋಸ್ಟ್ ಪೇಮೆಂಟ್ ಬ್ಯಾಂಕ್.
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಯೋಜನೆ.
ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ.
ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ನಿರ್ಮಾಣ ಗುರಿ. ಚರ್ಮೋದ್ಯಮಕ್ಕೆ ವಿಶೇಷ ಒತ್ತು.
೩೬ ಜೀವರಕ್ಷಕ ಔಷಧಿಗಳ ಮೇಲಿನ ಕಸ್ಟಮ್ಸ್ ತೆರಿಗೆ ರದ್ದು.
ಲಿಥಿಯಂ ಬ್ಯಾಟರಿ ಮೇಲಿನ ಕಸ್ಟಮ್ಸ್ ತೆರಿಗೆ ಕಡಿತ.
ಮೊಬೈಲ್ ಫೋನ್ ಬ್ಯಾಟರಿ ಉತ್ಪಾದನೆ ಹೆಚ್ಚಳ.
ಹಿರಿಯ ನಾಗರಿಕರ ಆದಾಯದ ಟಿಡಿಎಸ್ ಕಡಿತ.
ಎಲ್‌ಇಡಿ ಟಿವಿ, ಚರ್ಮ ಉತ್ಪನ್ನ, ಮೊಬೈಲ್ ದರ ಇಳಿಕೆ.
ಬಾಡಿಗೆ ಮನೆ ಟಿಡಿಎಸ್ ಮಿತಿ ೬ ಲಕ್ಷಕ್ಕೆ ಹೆಚ್ಚಳ.
ಆದಾಯ ತೆರಿಗೆದಾರರರಿಗೆ ಗುಡ್‌ನ್ಯೂಸ್ – ೧೨ ಲಕ್ಷದವರೆಗೆ ಟ್ಯಾಕ್ಸ್ ಪಾವತಿ ಇಲ್ಲ. ಬಜೆಟ್‌ನ ಕೊನೆಯಲ್ಲಿ ಮಧ್ಯಮ ವರ್ಗಕ್ಕೆ ಗಿಫ್ಟ್ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್.