ಯಾದಗಿರಿ : ರಾಜ್ಯದಲ್ಲಿ ಒಂದೆಡೆ ಮೈಕ್ರೋ ಫೈನಾನ್ಸ್ ಹಾವಳಿ ಎಲ್ಲೆ ಮೀರಿದೆ. ಈ ನಡುವೆ ಮೀಟರ್ ಬಡ್ಡಿ ದಂಧೆಗೆ ಯುವಕನೊಬ್ಬ ಬಲಿಯಾಗಿದ್ದಾನೆ.
ಈ ಘಟನೆ ನಡೆದಿರೋದು ಯಾದಗಿರಿ ಜಿಲ್ಲೆಯ ಲಾಜೇಗಡದಲ್ಲಿ. ಖಾಸಿಂ ಎಂಬಾತ ಮೃತ ಯುವಕ. ಮೃತ ಖಾಸೀಂ ಆರೋಪಿ ಯಾಸೀನ್ ಬಳಿ ಸಾಲ ಪಡೆದಿದ್ದ. ಜನವರಿ 19ರಂದು 35 ಸಾವಿರ ರೂಪಾಯಿ ಸಾಲ ಮರು ಪಾವತಿಸಬೇಕಿತ್ತು. ಆದರೆ ಮರು ಪಾವತಿಸುವಲ್ಲಿ ತಡವಾಗಿದ್ದಕ್ಕೆ ಯಾಸೀನ್ ಬಾರುಕೋಲಿಂದ ಹಲ್ಲೆ ನಡೆಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದಲ್ಲಿ ಅಲ್ಲಿ ಸಾಧ್ಯವಾಗದ ಹಿನ್ನೆಲೆ ಬಳಿಕ ಕಲಬುರಗಿಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
