ಚಿಕ್ಕಮಗಳೂರು:ಶ್ರೀ ರಾಮೇಶ್ವರ ಕ್ಷೇತ್ರ ನಿಡುವಾಳೆಯಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು. ಶ್ರೀ ರಾಮೇಶ್ವರ ದೇವಸ್ಥಾನ ಕ್ಷೇತ್ರದ ಆಡಳಿತ ದಾರರಾದ ಶ್ರೀ ಸುನೀಲ್ ಜೆ ಗೌಡ ದಂಪತಿಗಳು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ದೀಪೋಜ್ವಲನ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಣತೆಗಳು ಪ್ರಜ್ವಲಿಸಿದವು .
ಸುಡುಮದ್ದು ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿತು.
ದೀಪೋತ್ಸವದ ನಂತರ ಸಾರ್ವಜನಿಕ ಅನ್ನಸಂತರ್ಪಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶ್ವೇತಾ ಸುನೀಲ್ ಜೆ ಗೌಡ, ಸಿದ್ದಾಂತ್ ಗೌಡ, ಲಕ್ಷ್ಮೀ ಲಕ್ಷ್ಮಣ ಗೌಡ, ಗೀತಾ ಗೌಡ ರೂಪ ಗೌಡ , ರಾಮ್ ಭಟ್ ವಾಟೇಖಾನ್, ಮಧುಕರ ಗೋಖಲೆ, ಎನ್ ಆರ್ ನಾಗರಾಜ್ ಭಟ್, ಕ್ಷೇತ್ರದ ಅರ್ಚಕರಾದ ಚರಣ್ ಕಾರಂತ್ , ದಿನಕರ ಭಟ್, ಸಿಬ್ಬಂದಿ ಸೂರ್ಯನಾರಾಯಣ ಗ್ರಾಮಸ್ಥರಾದ ಶಿವಪ್ಪ ಉರುವಿನಖಾನ್, ವಿಶ್ವ ಆಟೋ , ಸುಬ್ರಾಯ ಗೌಡ ,ಹೆಚ್ ಆರ್ ಚಂದ್ರಶೇಖರ್ , ರವಿ ಬಿ ಉರುವಿನಖಾನ್, ಜಯಂತ್ ಪೂಜಾರಿ , ಚಂದ್ರಶೇಖರ್ , ಮುರಳಿ ಜಾವಳಿ, ಶೇಖರ್ ಮಾವಿನಕಟ್ಟೆ, ನಾಗೇಶ್ ಸಪಾಲ್ಯ, ಸುರೇಶ್ , ಶ್ರೀಮತಿ ಸುಮಿತ್ರಾ ಜಗನ್ನಾಥ್ , ಶಂಕರ್.ಸಂತೊಷ್ ಸಾಲಿಯಾನ್ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಇದ್ದರು.
