Monday, August 4, 2025
!-- afp header code starts here -->
Homebig breakingಸಂತೆಗೆ ಹೊರಟವರು ಸೇರಿದ್ದು ಮಸಣಕ್ಕೆ - ಯಲ್ಲಾಪುರ ಲಾರಿ ಅಪಘಾತದಲ್ಲಿ ಗರ್ಭಿಣಿ ಸೇರಿ ೧೦ ಮಂದಿ...

ಸಂತೆಗೆ ಹೊರಟವರು ಸೇರಿದ್ದು ಮಸಣಕ್ಕೆ – ಯಲ್ಲಾಪುರ ಲಾರಿ ಅಪಘಾತದಲ್ಲಿ ಗರ್ಭಿಣಿ ಸೇರಿ ೧೦ ಮಂದಿ ದುರ್ಮರಣ…

ಉತ್ತರ ಕನ್ನಡ : ಲಾರಿ ಪಲ್ಟಿಯಾಗಿ ೧೦ ಮಂದಿ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದೆ. ಮೃತರನ್ನು ಹಾವೇರಿ ಜಿಲ್ಲೆ ಸವಣೂರು ನಿವಾಸಿಗಳು ಅಂತ ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಈ ಘಟನೆ ಸಂಭವಿಸಿದೆ. ಲಾರಿಯಲ್ಲಿ ೩೦ ಮಂದಿ ತರಕಾರಿ, ಹಣ್ಣು ಹಂಪಲುಗಳನ್ನು ತುಂಬಿಕೊಂಡು ಕುಮಟಾ ಸಂತೆಗೆ ತೆರಳುತ್ತಿದ್ದರು. ಬೆಳಗ್ಗೆ ನಸುಕಿನ ಜಾವ ೩ ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ೦೯ ಮಂದಿ ಸ್ಥಳದಲ್ಲಿ ಕೊನೆಯುಸಿರೆಳೆದಿದ್ರೆ, ಒಬ್ಬರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಸ್ಥಳೀಯರು ಅನೇಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗೊಂಡಿರುವವರಿಗೆ ಕುಮಟಾ ಹಾಗೂ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಹಣ್ಣು ಹಂಪಲು, ತರಕಾರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಶಾಸಕ ಶಿವರಾಮ್‌ ಹೆಬ್ಬಾರ್‌ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ೧೦ ಮಂದಿ ಅಪಾಯದಿಂದ ಪಾರಾಗಿದ್ದಾರೆ ಅಂತ ನಿರ್ದೇಶಕ ಕಮ್ಮಾರ ತಿಳಿಸಿದ್ದಾರೆ.
ಸವಣೂರಿನಿಂದ ಈ ತಂಡ ಪ್ರತಿ ವಾರ ಕುಮಟ ಸಂತೆಗೆ ತೆರಳುತ್ತಿದ್ದರು. ಅದರಂತೆ ಇಂದು ಕೂಡಾ ಹಣ್ಣು, ತರಕಾರಿಗಳ ವ್ಯಾಪಾರಕ್ಕೆ ತೆರಳುತ್ತಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!