ನಟ ದ್ವಾರಕೀಶ್ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Dwarakish; ನಟ ನಿರ್ದೇಶಕ, ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನು ನೆನಪು ಮಾತ್ರ. ಖ್ಯಾತ ದಿಗ್ಗಜ ದ್ವಾರಕೀಶ್ ರವರ ಅಂತಿಮ ದರ್ಶನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಇನ್ನು ಇವರ ಪಾರ್ಥಿವ ಶರೀರಕ್ಕೆ ರಾಜ್ಯದ ಸಿಎಂ ಸಿದ್ದರಾಮಯ್ಯ , ರಾಜಕೀಯ ಗಣ್ಯರು, ಕನ್ನಡ ಚಿತ್ರರಂಗದ ಸಿನಿಮಾ ಗಣ್ಯರು ನಮನ ಸಲ್ಲಿಸಿದರು.
ನಟ ದ್ವಾರಕೀಶ್ ರವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಟನ ಮನೆಗೆ ನಾರಾಯಣ ನೇತ್ರಾಲಯದ ವೈದ್ಯರು ಆಗಮಿಸಿ ಕಣ್ಣುಗಳನ್ನು ಸಂಗ್ರಹಿಸಿದ್ದಾರೆ. ಅವರ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆಗೆ ದ್ವಾರಕೀಶ್ ಸಾಕ್ಷಿಯಾಗಿದ್ದಾರೆ.
ಮೃತಪಟ್ಟವರ ಕಣ್ಣು ದಾನ
ಕಣ್ಣು ದಾನ ಮಾಡುವವರು ಮೃತಪಟ್ಟ 14 ಗಂಟೆಯೊಳಗೆ ಕಣ್ಣು ದಾನ ಮಾಡಬಹುದು,ಅದಾಗಿಯೂ ಕಣ್ಣಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಇದ್ದರೇ ಹೆಚ್ಚು ಕಾಲ ಸಂಗ್ರಹಿಸಿ, ಕಣ್ಣುಗಳಿಗೆ ಸಣ್ಣ ಪುಟ್ಟ ಹಾನಿಯಾದವರಿಗೆ ಅಥವಾ ಕಂಪ್ಲೀಟ್ ಅಂಧತ್ವ ಇರುವವರಿಗೆ ದಾನ ಪಡೆದ ಕಣ್ಣುಗಳನ್ನು 10 ಜನಕ್ಕೆ ಬಳಸಬಹುದಾಗಿದೆ.
ಇನ್ನು ನಟ ದ್ವಾರಕೀಶ್ ಎರಡನೇ ಪತ್ನಿ ಶೈಲಜಾ ಮಾಧ್ಯಮದವರೊಂದಿಗೆ ಮಾತಾನಾಡಿ, ಪ್ರೀತಿಗೆ ಇನ್ನೊಂದು ಹೆಸರೇ ಅವರು. ಎಲ್ಲರನ್ನು ಪ್ರೀತಿಸುತ್ತಿದ್ದರು. ಅವರು ನನಗೆ ಯಾವತ್ತೂ ಮೋಸ ಮಾಡಲಿಲ್ಲ. ಅವರ ಪ್ರೀತಿ ನನಗೆ ಎಂದಿಗೂ ಇರತ್ತೆ. ದ್ವಾರಕೀಶ್ ಅವರು ಅಂಬುಜಕ್ಕನಿಗೆ ಎಷ್ಟು ಪ್ರೀತಿ ಕೊಟ್ಟರೋ ಅಷ್ಟೇ ಪ್ರೀತಿ ಕೊಟ್ಟರು. ದ್ವಾರಕೀಶ್ ನನಗೆ ಯಾವತ್ತೂ ಮೋಸ ಮಾಡಲಿಲ್ಲ, ಕಡೆಗಾಣಿಸಲಿಲ್ಲ. ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ ಎಲ್ಲರನ್ನು ಬಿಟ್ಟು ಹೋಗ್ತಿದ್ದಾರೆ. ಪತಿ ಬದುಕಿನ ಜೊತೆಗಿನ ದಿನ ನೆನದು ಕಣ್ಣೀರು ಇಟ್ಟಿದ್ದಾರೆ.
ದ್ವಾರಕೀಶ್ ಹಾಸ್ಯಕ್ಕೂ ಸೈ ಗಂಭೀರ ಪಾತ್ರಕ್ಕೂ ಸೈ ಎನಿಸಿಕೊಂಡು ಎಲ್ಲರನ್ನು ರಂಜಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಪ್ರಚಂಡ ಕುಳ್ಳ ರವರ ಕೊಡುಗೆ ಅಪಾರ. ದ್ವಾರಕೀಶ್ ಅಗಲಿಕೆ ಚಂದನವನಕ್ಕೆ ನಷ್ಟವಾಗಿದೆ. ಇನ್ನು ಹಿರಿಯ ನಟ ದ್ವಾರಕೀಶ್ ಅಂತ್ಯಕ್ರಿಯೆ ಚಾಮರಾಜಪೇಟೆಯಲ್ಲಿ ನಡೆಯಲಿದೆ.