ಪಬ್ಲಿಕ್ ಇಂಪ್ಯಾಟ್ ಚಿಕ್ಕಮಗಳೂರು : ರಾಜ್ಯದಲ್ಲಿ ಸ್ಥಿರಾಸ್ತಿಗಳ ನೋಂದಣಿ ಸಂಬಂಧ ಅನುಷ್ಠಾನಗೊಳಿಸಿರುವ ʼಎನಿವೇರ್ ರಿಜಿಸ್ಟ್ರೇಷನ್ʼ ಪ್ರಕ್ರಿಯೆಗೆ ಚಿಕ್ಕಮಗಳೂರು ಉಪನೋಂದಣಿ ಕಚೇರಿಯಲ್ಲಿ ಸೆ.2ರಿಂದ ಆರಂಭವಾಗಲಿದೆ.
ನೂತನ ವ್ಯವಸ್ಥೆಯ ಜಾರಿಯಿಂದ ಸ್ವತ್ತುಗಳ ಕ್ರಯ, ದಾನ ವಿಭಾಗ, ಆಧಾರ, ಭೋಗ್ಯ, ಜಿಪಿಎ, ವಿಲ್ ಸೇರಿದಂತೆ ಇನ್ನಿತರೆ ವ್ಯವಹಾರಗಳನ್ನು ಜಿಲ್ಲೆಯ 7 ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ನೋಂದಣಿ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಹಾಜರಿದ್ದು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗುತ್ತದೆ. ತಾವು ಕಚೇರಿಗೆ ತೆರಳುವ ಸಂದರ್ಭ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಅನ್ನೂ ಜತೆಗೆ ತಂದು ಸಹಕರಿಸುವಂತೆ ಜಿಲ್ಲಾ ನೋಂದಣಾಧಿಕಾರಿ ಕರಿಯಮ್ಮ ತಿಳಿಸಿದ್ದಾರೆ.
