ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯಾದ್ಯಂತ ಕಾಡಾನೆಗಳ ಚಲನವಲನ ಕಂಡುಬರುತ್ತಿರುವುದು ಸಾಮಾನ್ಯವಾಗಿದೆ. ಅರೇಹಳ್ಳಿ,ಬಿಕ್ಕೋಡು,ಅನುಘಟ್ಟ ಪಂಚಾಯಿತಿಗೊಳಪಡುವ ಗ್ರಾಮಗಳಲ್ಲಿ ಆನೆಗಳು ಕೆಲ ದಿನಗಳಿಂದ ಕಾಣಿಸಿಕೊಳ್ಳದೇ ಇದ್ದುದ್ದರಿಂದ ಸಾರ್ವಜನಿಕರು ಕೊಂಚ ನಿರಾಳರಾಗಿದ್ದರು.
ಆದರೆ ಒಂಟಿ ಕಾಡಾನೆಯೊಂದು ಲಿಂಗಾಪುರ ಗ್ರಾಮದ ಐತಪ್ಪ ಪೂಜಾರಿ ಎಂಬುವವರ ಮನೆ ಬಳಿ ಹಗಲು ವೇಳೆ ಕಾಣಿಸಿಕೊಂಡು ನಿವಾಸಿಗಳಲ್ಲಿ ಆತಂಕವನ್ನುಂಟುಮಾಡಿತ್ತು. ಮನೆಯಂಗಳದ ಮೂಲಕ ಮುಖ್ಯ ರಸ್ತೆಗೆ ತೆರಳಿದ ಕಾಡಾನೆ ಕಂಡು ವಾಹನ ಸವಾರರು ಭಯಭೀತರಾದರು.
ರಾತ್ರಿ ವೇಳೆ ಮುಖ್ಯರಸ್ತೆಯಲ್ಲಿ ನಿಂತಿದ್ದ ಕಾಡಾನೆಯಿಂದ ವಾಹನ ಸವಾರರಿಗೆ ನಡುಕ ಉಂಟಾಯಿತು. ವಿಚಾರ ತಿಳಿದು ಸ್ಥಳಕ್ಕೆ ಬಂದ ಇಟಿಎಫ್ ಸಿಬ್ಬಂದಿಗಳು ಕಾಡಾನೆಯನ್ನು ಓಡಿಸುವುದರ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
