ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದಾಗ ಈ ಮಾರಕ ರೋಗ ಹರಡಬಾರದು ಅನ್ನೋ ಕಾರಣಕ್ಕೆ ಭಾರತ ಸರ್ಕಾರ ಎಲ್ಲರಿಗು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಕೋವಿಶೀಲ್ಡ್ ಲಸಿಕೆಯನ್ನ ಹಾಕಿತ್ತು. ಇದರ ಯಾವುದೇ ಅಡ್ಡ ಪರಿಣಾಮ ಇಲ್ಲ ಅಂತ ಸರ್ಕಾರ ಈ ಲಸಿಕೆಯನ್ನ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಜನರಿಗೆ ಭರವಸೆಯನ್ನೂ ನೀಡಿತ್ತು. ಆದ್ರೆ ಲಸಿಕೆ ಪಡೆದು ಆರಾಮಾಗಿದ್ದೀವಿ ಅನ್ನೋವಷ್ಟರಲ್ಲಿ ಹಠಾತ್ ಸಾವು ಪ್ರಕರಣಗಳು ಜನರನ್ನು ಭಯಭೀತಿಗೊಳಿಸಿತ್ತು. ಆದ್ರೀಗ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಹೊರಬಿದ್ದಿದೆ. ಅದೇನಂದ್ರೆ ,ಕೋವಿಶೀಲ್ಡ್ ಲಸಿಕೆ ಹಾಕಿಸಿಕೊ೦ಡಿರೋರಿಗೆ ಅಡ್ಡ ಪರಿಣಾಮ ಆಗುತ್ತದೆ ಎಂದು ಕೋವಿಶೀಲ್ಡ್ ಲಸಿಕೆ ತಯಾರಿಸಿದ, ಬ್ರಿಟನ್ ನ ಔಷಧ ಕಂಪನಿ ಆಸ್ಟ್ರಾಜೆನಿಕಾ ಸಂಸ್ಥೆಯೇ ಬ್ರಿಟನ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದೆ.

ಕೋವಿಡ್ ಲಸಿಕೆಯಿಂದ ಆಗುತ್ತಿರುವ ಆರೋಗ್ಯ ಸಮಸ್ಯೆ ಹಾಗು ಸಾವು ಪ್ರಕರಣಗಳ ಕುರಿತು ವಿಚಾರಣೆ ನಡೆಸುತ್ತಿರುವ ಬ್ರಿಟನ್ ನ್ಯಾಯಾಲಯದ ಎದುರು, ಕೋವಿಶೀಲ್ಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿ ತಪ್ಪೊಪ್ಪಿಕೊಂಡಿದೆ . ಈ ಸುದ್ದಿ ಭಾರತಿಯರ ಪಾಲಿಗೆ ನಿಜಕ್ಕೂ ಶಾಕಿಂಗ್ ಆಗಿದೆ.
ಆಸ್ಟ್ರಾಜೆನಿಕಾ ಸಂಸ್ಥೆ ಮತ್ತು ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್ಸ್‌ಸ್ಟಿಟ್ಯೂಟ್ ತಯಾರಿಸಿತ್ತು. ಇದಕ್ಕೆ ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಟ್ಟಿತ್ತು. ಈ ಲಸಿಕೆಯನ್ನ ಭಾರತದಲ್ಲಿ ಕಡ್ಡಾಯವಾಗಿ ಕೋಟ್ಯಂತರ ಜನರಿಗೆ ಎರಡೆರಡು ಡೋಸ್ ನೀಡಲಾಗಿದೆ. ಹೀಗಾಗಿ ಭಾರತೀಯರೆಲ್ಲರೂ ಆತಂಕಗೊಂಡಿದ್ದಾರೆ.
ನಿನ್ನೆಯಷ್ಟೇ ( ಮೇ 1)ಕ್ಕೆ ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಸಮಾಜವಾದಿ ಪಕ್ಷದ ಮುಖ೦ಡ ಅಖಿಲೇಶ್ ಯಾದವ್ , ಲಸಿಕೆ ತಯಾರಿಕಾ ಕಂಪೆನಿಗಳಿ೦ದ ದೇಣಿಗೆ ಪಡೆಯಲು ಬಿಜೆಪಿ ಸರ್ಕಾರ ಜನರ ಜೀವದ ಜೊತೆ ಆಟವಾಡಿದೆ ಅಂತ ಆರೋಪಿಸಿದ್ದರು. ಇಂಥ ಮಾರಕ ಔಷಧಗಳಿಗೆ ಅನುಮೋದನೆ ನೀಡಿ, ಹತ್ಯೆಯ ಸಂಚು ರೂಪಿಸಲಾಗಿದೆ ಅಂತ ಕಿಡಿಕಾರಿದ್ದರು. ಇದಕ್ಕೆ ಕಾರಣದರದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿ, ಬಿಜೆಪಿ ಸರ್ಕಾರವನ್ನ ಜನರು ಎಂದು ಕ್ಷಮಿಸುವುದಿಲ್ಲ ಎಂದು ಎಕ್ಸ್ ನಲ್ಲಿ ಬರೆದಿದ್ದರು . ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇದರ ಸೈಡ್ ಎಫೆಕ್ಟ್ ಆಗುವ ಲಕ್ಷಣಗಳಿವೆ ಎಂದು ಹೇಳಿದ್ದಾರೆ.