ಮಂಡ್ಯ; ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು’ ಪರ ಭರ್ಜರಿ ಪ್ರಚಾರ ಮಾಡುತ್ತಿರುವುದಕ್ಕೆ ಸಂಸದೆ ಸುಮಲತ ಮೇಲೆ ಹಲವಾರು ಪ್ರಶ್ನೆಗಳನ್ನು ಹೇರಲಾಗಿತ್ತು. ಇನ್ನು ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಸುಮಲತಾ, ಮಂಡ್ಯದಲ್ಲಿ ಯಾರ ಪರ ಪ್ರಚಾರ ಮಾಡಬೇಕು ಅನ್ನೋದು ದರ್ಶನ್ ಅವರಿಗೆ ಬಿಟ್ಟ ವಿಚಾರ. ನಾನು ಸ್ಪರ್ಧೆ ಮಾಡಿದ್ರೆ ನನಗೆ ಸಪೋರ್ಟ್ ಮಾಡ್ತಾ ಇದ್ರು. ಹೀಗಾಗಿ ಅವರು ಯಾರಿಗಾದರೂ ಪ್ರೋತ್ಸಾಹ ನೀಡಲಿ ಅದು ಅವರ ಹಕ್ಕು ಎಂದರು.
ಸುಮಲತಾ ಅವರೇ ದರ್ಶನ್ ನನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳಿಸಿದ್ದಾರೆ ಎಂಬುದು ಊಹಾಪೋಹ.ಅದನ್ನು ನಂಬಬೇಡಿ.ನಾನೇ ಕಳಿಸಿದ್ರೆ ನನಗೇ ಕಾಂಗ್ರೆಸ್ ಗೆ ಸೇರಬಹುದಿತ್ತಲ್ವಾ?
ಅಸೆಂಬ್ಲಿ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು. ದರ್ಶನ್ ಪಕ್ಷ ನೋಡುವುದಿಲ್ಲ ವ್ಯಕ್ತಿ ನೋಡಿ ಪ್ರೋತ್ಸಾಹ ನೀಡುತ್ತಾರೆ.