ಧರ್ಮಸ್ಥಳ: ನೂರಾರು ಶವಗಳನ್ನು ನನ್ನ ಕೈಯಿಂದ ಹೂಳಿಸಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದ ವ್ಯಕ್ತಿ ಗುರುತಿಸಿದ್ದ ಒಟ್ಟು 13 ಪಾಯಿಂಟ್ ಗಳಲ್ಲಿ ಇಂದು ಕಾರ್ಯಾಚರಣೆ ಮಾಡಲಾಯಿತು, ಆದರೆ ಈ ಸಂದರ್ಭದಲ್ಲಿ ಯಾವುದೇ ಶವದ ಕಳೆಬರಹ ಪತ್ತೆಯಾಗಿಲ್ಲ.
ನಂತರ ಸುಮಾರು 12 ಪೌರಕಾರ್ಮಿಕರ ಸಹಾಯದಿಂದ ಜೆಸಿಬಿ ಬಳಸಿ ಸುಮಾರು 12 ಅಡಿ ಆಳದವರೆಗೂ ಗುಂಡಿ ತೋಡಿ ಸಹ ಪರಿಶೀಲಿಸಲಾಯಿತು. ಆರಂಭದಲ್ಲಿ ಪಿಕ್ಕಾಸು, ಹಾರೆ ಮೂಲಕ ತೆಗೆಯಲಾಯಿತು, ಕಳೇಬರಹ ಸಿಗದಿದ್ದಾಗ ದೂರುದಾರ ಮತ್ತಷ್ಟು ಅಲೆಯುವಂತೆ ಒತ್ತಾಯಿಸಿದ್ದರಿಂದ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು. ಸತತ 2 ಗಂಟೆಗಳಿಂದ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.