ಹಾಸನ: ಸಕಲೇಶಪುರ ತಾಲ್ಲೂಕಿನ ವೆಂಕಟಿಹಳ್ಳಿ ಗ್ರಾಮದ ಬಳಿ ಎರಡು ಸಾರಿಗೆ ಬಸ್ಸುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಲವರು ಗಾಯಗೊಂಡಿದ್ದರು. ಹೀಗಾಗಿ ಶಾಸಕ ಸಿಮೆಂಟ್ ಮಂಜು ಅವರು ಆಸ್ಪತ್ರೆಗೆ ತೆರಳಿ ಗಾಯಳುಗಳ ಆರೋಗ್ಯ ವಿಚಾರಿಸಿದರು.
ಹೌದು .. ಬುಧವಾರ ಬೆಳಗ್ಗೆ ಎರಡು ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾ ಹಲವರಿಗೆ ಗಾಯಗಳಾಗಿದ್ದು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮಕ್ಕಳು,ಮಹಿಳೆಯರು ಸೇರಿದಂತೆ 18 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ವಿರುದ್ಧ ಹೌಹಾರಿದ ಶಾಸಕರು ಸರಿಯಾದ ಕ್ರಮವನ್ನು ಕೈಗೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು ಆ ನಂತರ ಸ್ವತಃ ಶಾಸಕರೇ ಗಾಯಳುವನ್ನು ಹಾಸಿಗೆ ಮೇಲೆ ಕೂರಿಸಿ ಸಾಂತ್ವನ ಹೇಳಿದರು.
ಆ ನಂತರ ಅಪಘಾತಕ್ಕೆ ಕಾರಣರಾದ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.
ಎರಡು ಸಾರಿಗೆ ಬಸ್ ಗಳ ಅಪಘಾತ ಪ್ರಕರಣ : ಆಸ್ಪತ್ರೆಗೆ ಭೇಟಿ ನೀಡಿ ಗಾಯಳು ಅರೋಗ್ಯ ವಿಚಾರಿಸಿದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಡೆಯುತ್ತಿರುವ ಮಕ್ಕಳು,ಮಹಿಳೆಯರು ಸೇರಿದಂತೆ 18 ಕ್ಕೂ ಹೆಚ್ಚು ಮಂದಿ.
ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿ ವಿರುದ್ಧ ಹೌಹಾರಿದ ಶಾಸಕರು.
ಅಪಘಾತಕ್ಕೆ ಕಾರಣರಾದ ಚಾಲಕರ ವಿರುದ್ಧ ಕ್ರಮಕ್ಕೆ ಸೂಚನೆ.
ಸ್ವತಃ ಶಾಸಕರೇ ಗಾಯಳುವನ್ನು ಹಾಸಿಗೆ ಮೇಲೆ ಕೂರಿಸಿ ಸಾಂತ್ವನ ಹೇಳಿದರು.