Monday, March 30, 2026
Homeಇತರೆಬಿಗ್ ಬಾಸ್‌ನೇ ಖರೀದಿ ಮಾಡ್ತೇನೆ ಅಂದಿದ್ದ ಲಾಯರ್‌ ಜಗದೀಶ್‌ ಗಳಗಳನೆ ಅತ್ತಿದ್ಯಾಕೆ..?

ಬಿಗ್ ಬಾಸ್‌ನೇ ಖರೀದಿ ಮಾಡ್ತೇನೆ ಅಂದಿದ್ದ ಲಾಯರ್‌ ಜಗದೀಶ್‌ ಗಳಗಳನೆ ಅತ್ತಿದ್ಯಾಕೆ..?

ಬೆಂಗಳೂರು : ಬಿಗ್ ಬಾಸ್ ಕನ್ನಡದ ಮನೆಯೊಳಗೆ ಮೊದಲ ವಾರದಲ್ಲೇ ಎರಡು ಬಣ ಸೃಷ್ಟಿಯಾಗಿದೆ. ಇರುವ 17 ಜನರಲ್ಲಿ 16 ಜನರದ್ದು ಒಂದು ಗುಂಪಾಗಿದೆ. ಇನ್ನು ಉಳಿದಿರುವ ಒಬ್ಬ ಮಾತ್ರ ಸಿಂಗಲ್‌ ಸಿಂಹ ಥರ ಹೋರಾಡ್ತಿದ್ದಾರೆ. ಅದು ಮತ್ಯಾರು ಅಲ್ಲ, ಎಲ್ಲಾ ವಿಷ್ಯಕ್ಕೂ ಎಂಟ್ರಿ ಕೊಟ್ಟು ಅಬ್ಬರಿಸುವ ಲಾಯರ್‌ ಜಗದೀಶ್‌. ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗಿನಿಂದ ಲಾಯರ್ ಜಗದೀಶ್ ಎಲ್ಲಾ ನನ್ನದೇ ನಡೀಬೇಕು ಅಂತ ಎಲ್ಲಾ ಸಂದರ್ಭದಲ್ಲೂ ಏಲ್ಲರ ಜತೆಗೂ ಕಿರಿಕ್‌ ಮಾಡಿಕೊಳ್ತಾನೇ ಇರ್ತಾರೆ.
ಇದಕ್ಕೆ ಸರಿಯಾಗೇ ತಿರುಗೇಟು ಕೊಟ್ಟಿರುವ ಮಿಕ್ಕ ಸ್ಪರ್ಧಿಗಳು ಸರಿಯಾಗೇ ಟಾಂಗ್‌ ಕೊಡುತ್ತಿದ್ದಾರೆ. ಇಂಥ ಬೆಳವಣಿಗೆ ನಡುವೆ ತನ್ನ ಅಪ್ಪ ಅಮ್ಮನನ್ನು ನೆನಪು ಮಾಡಿಕೊಂಡಿರುವ ಜಗದೀಶ್‌ ಬಿಗ್‌ಬಾಸ್‌ ಮನೆಯೊಳಗೆ ಕಣ್ಣೀರು ಹಾಕಿದ್ದಾರೆ. ಇವ್ರ ಈ ನಡೆ ಬಗ್ಗೆ ಡಿಫರೆಂಟ್‌ ಅಭಿಪ್ರಾಯಗಳು ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಕೆಲವರು ಜಗದೀಶ್‌ ಬಗ್ಗೆ ಪಾಸಿಟಿವ್‌ ಆಗಿ ಮಾತಾಡಿದ್ರೆ, ಇನ್ನೂ ಕೆಲವರು ಇದು ತನ್ನ ಬಗ್ಗೆ ಕರುಣೆ ಸೃಷ್ಟಿಸುವ ಗಿಮಿಕ್‌ ಅಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!