ರಾಮನಗರ: ನೋಡ್ತಾ ಇರಿ ಬಿಜೆಪಿ ಜೆಡಿಎಸ್ ಪಕ್ಷವನ್ನು ಹೇಗೆ ಮುಗಿಸುತ್ತೆ ಅಂತ. ಬಿಜೆಪಿ ಜೆಡಿಎಸ್ ನುಂಗಿಬಿಡೋದು ಖಂಡಿತ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ರು.
ಅವರು ಇಂದು ಡಿ.ಕೆ.ಸುರೇಶ್ ಪರ ರಾಮನಗರದಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಆದ್ರೆ ಬಿಜೆಪಿ ಜೆಡಿಎಸ್ ಪಕ್ಷವನ್ನು ಮುಗಿಸಿಬಿಡುತ್ತೆ ನೋಡಿ ಎಂದರು. ನನಗೆ ದೇವೇಗೌಡರ ಕುಟುಂಬದ ಬಗ್ಗೆ ಯಾವುದೇ ದ್ವೇಷ ಇಲ್ಲ. ಹಾಗೇನಾದ್ರೂ ಇದ್ದಿದ್ರೆ ಕುಮಾರಸ್ವಾಮಿಯನ್ನು ಸಿಎಂ ಮಾಡ್ತಾನೆ ಇರಲಿಲ್ಲ ಎಂದರು.
ಇನ್ನು ಡಾ. ಮಂಜುನಾಥ್ ಕೇಂದ್ರದಲ್ಲಿ ಆರೋಗ್ಯ ಸಚಿವರಾಗ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೆದ್ರೆ ತಾನೇ ಮಂತ್ರಿ ಆಗೋದು ಎಂದು ವ್ಯಂಗ್ಯವಾಡಿದ್ರು.