Monday, February 9, 2026
Homeಇತರೆಏನಿದು ಪ್ರೀತಂಗೌಡ ಬೆಂಬಲಿಗರ ಅಟ್ಟಹಾಸ.?

ಏನಿದು ಪ್ರೀತಂಗೌಡ ಬೆಂಬಲಿಗರ ಅಟ್ಟಹಾಸ.?

ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡ್ತಿದ್ದ ಬಿಜೆಪಿ ಮುಖಂಡನ ಮೇಲೆ ಪ್ರೀತಂಗೌಡ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಹಾಸನ; ಪ್ರೀತಂಗೌಡ ಹಾಗೂ ಜೆಡಿಎಸ್ ನಡುವಿನ ವೈಮನಸ್ಸಿನ ಸಮರಕ್ಕೆ ಮಾಧ್ಯಮ ವಕ್ತಾರ ಹಲ್ಲೆಗೊಳಗಾಗಿದ್ದಾರೆ. ಬಿಜೆಪಿಯ ಮಾಧ್ಯಮ ವಕ್ತಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಜೊತೆಗೆ ಐನೆಟ್ ಎಂಬ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ ವಿಜಯ್‌ ಕುಮಾರ್‌ ಮೇಲೆ 30ಕ್ಕೂ ಹೆಚ್ಚು ಪ್ರೀತಂಗೌಡ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಮಾಧ್ಯಮ ವಕ್ತಾರ ಎನಿಸಿಕೊಂಡಿದ್ದ ವಿಜಯ್ ಕುಮಾರ್ ಹಾಸನದ ಎಂಜಿ ರಸ್ತೆಯಲ್ಲಿ ಐ ನೆಟ್ ಶಾಪ್ ನಲ್ಲಿದ್ದ ವೇಳೆ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿ ಕಂಪ್ಯೂಟರ್ ಸೆಂಟರ್ ಕೂಡ ಪುಡಿ ಪುಡಿ ಮಾಡಿ ಹಲ್ಲೆ ನಡೆಸಿದ್ದಾರೆ.

ಪ್ರೀತಂಗೌಡ ಬೆಂಬಲಿಗರಿಂದ ಗಾಯಗೊಂಡ ವಿಜಯ್ ಕುಮಾರ್ ರವರನ್ನು ಹಾಸನದ ಹಿಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರೀತಂಗೌಡ ಹಾಗೂ ಬಿಜೆಪಿಯ ಮಾಧ್ಯಮ ವಕ್ತಾರ ವಿಜಯ್ ಕುಮಾರಗೂ ಇದ್ದ ನಂಟು..?

ಬಿಜೆಪಿಯ ಮಾಧ್ಯಮ ವಕ್ತಾರ ವಿಜಯ್ ಕಳೆದ ವಿಧಾನಸಭೆ ಚುನಾವಣೆಯಿಂದ ಪ್ರೀತಂಗೌಡ ಟೀಂ ಜೊತೆ ಅಂತರ ಕಾಯ್ದುಕೊಂಡಿದ್ದರು. ಹಾಸನ ಲೋಕ ಸಭಾ ಕ್ಷೇತ್ರದಲ್ಲಿ ವಿರೋಧದ ನಡುವೆಯೂ ಮೈತ್ರಿ ಅಭ್ಯರ್ಥಿ ಪರ ವಿಜಿ ಕುಮಾರ್ ಪ್ರಚಾರ ನಡೆಸಿದ್ದನ್ನು ಹಾಗೂ ಇತ್ತಿಚೇಗಷ್ಟೇ ವಿಜಿ ಅವರ ಶಾಪ್ ಗೆ ಪ್ರಜ್ವಲ್ ರೇವಣ್ಣ ಖುದ್ದು ಭೇಟಿಯಾಗಿ ಅಭಿನಂದಿಸಿದನ್ನು ಪ್ರೀತಂಗೌಡ ಬೆಂಬಲಿಗರು ಗಮನಿಸಿ ವಿಜಿ ಮೇಲೆ ಕಣ್ಣಿಟ್ಟಿದ್ದರು. ಆದರೆ ಇಂದು ವಿಜಯ್ ಕುಮಾರ್ರವನ್ನು ಏಕಾಏಕಿ ಅಟ್ಯಾಕ್‌ ಮಾಡಿದ್ದಾರೆ.

ಈ ಬಗ್ಗೆ ತಿಳಿದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ ಐನೆಟ್ ವಿಜಿಯಿಂದ ಮಾಹಿತಿ ಪಡೆದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!