Tuesday, February 10, 2026
Homeಇತರೆಮೂಡಿಗೆರೆ : ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಸ್ತೆ ತಡೆ ನಡೆಸಿ ಪ್ರತಿಭಟನೆ!

ಮೂಡಿಗೆರೆ : ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಸ್ತೆ ತಡೆ ನಡೆಸಿ ಪ್ರತಿಭಟನೆ!

ಮೂಡಿಗೆರೆ: ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆ ಸೇರಿ ಪ್ರತಿ ಹಳ್ಳಿ ಹಳ್ಳಿಯ ರಸ್ತೆಗಳು ಕೂಡ ಗುಂಡಿಮಯವಾಗಿದ್ದು, ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಯಾವ ಅಭಿವೃದ್ಧಿಯ ಕಾರ್ಯಗಳನ್ನು ಮಾಡದೆ, ಹಾಲಿ ಇರುವ ರಸ್ತೆಗಳ ಗುಂಡಿಯನ್ನು ಕೂಡ ಮುಚ್ಚಲಾಗದ ಪರಿಸ್ಥಿತಿಯಲ್ಲಿರುವುದರ ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರುಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇಂತಹ ಅನೇಕ ವಿಚಾರಗಳನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಇಂದು ಪಟ್ಟಣದ ಲಯನ್ಸ್ ವೃತ್ತದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀಯುತ ಬಿ ವೈ ವಿಜಯೇಂದ್ರರವರ ಸೂಚನೆಯಂತೆ ಮೂಡಿಗೆರೆ ಬಿಜೆಪಿ ಮಂಡಲದ ವತಿಯಿಂದ ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು.

ರಸ್ತೆ ತಡೆ ಉದ್ದೇಶಿಸಿ ಮೂಡಿಗೆರೆ ಮಂಡಲದ ತಾಲೂಕು ಅಧ್ಯಕ್ಷ ಗಜೇಂದ್ರ ತರುವೆ ಮಾತನಾಡಿ
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಇದೆ. ಸರ್ಕಾರ ಅಭಿವೃದ್ಧಿ ಕಾರ್ಯ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ.

ಹೀಗಾಗಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಕಾರ್ಯದರ್ಶಿ ರಘು ಜನ್ನಪುರ ಮಾತನಾಡಿ ರಸ್ತೆ ಗುಂಡಿ ಮುಚ್ಚಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿದರು.ಕೆಲವು ದಿನಗಳ ಹಿಂದೆ ಆಟೋ ಚಾಲಕ ಮಂಜುನಾಥ್ ಅವರ ಸಾವಿಗೂ ಈ ಗುಂಡಿಮಯ ರಸ್ತೆ ಕಾರಣವಾಗಿದೆ

. ಒಂದು ಪಕ್ಷ ರಸ್ತೆ ಚೆನ್ನಾಗಿದ್ದರೆ ಚಾಲಕ ಬದುಕುಳಿಯುತ್ತಿದ್ದರು ಎಂದರು. ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಅಭಿವೃದ್ಧಿ ಮಾಡದೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಕಿಡಿ ಕಾರಿದರು.

ಮೂಡಿಗೆರೆ ಕ್ಷೇತ್ರದಲ್ಲೂ ರಸ್ತೆ ಗುಂಡಿ ಸಮಸ್ಯೆಗೆ ಮುಕ್ತಿನೀಡಲು ಶಾಸಕಿ ಗಮನ ಹರಿಸುತ್ತಿಲ್ಲ ಎಂಬುದಾಗಿ ಆರೋಪಿಸಿದರು.

ಗುಂಡಿಮಯ ರಸ್ತೆಗಳಿಂದ ಆಂಬುಲೆನ್ಸ್ ಚಾಲಕರು, ವಾಹನ ಸವಾರರಿಗೂ ಕಿರಿ ಕಿರಿ ಉಂಟಾಗಿದ್ದು. ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ನಮ್ಮ ಮೂಡಿಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.ರಸ್ತೆಗಳು ಗುಂಡಿ ಬಿದ್ದಿವೆ, ಕ್ಷೇತ್ರದ ಉದ್ದಕ್ಕೂ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ರಸ್ತೆ ಗುಂಡಿಗಳನ್ನೂ ಮುಚ್ಚಲು ಅಸಮರ್ಥವಾಗಿರುವ ಶಾಸಕಿ ವಿರುದ್ದ ಹರಿಹಾಯ್ದರು.

ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಗಳಾದ ಅನುಕುಮಾರ್ ಪಟ್ಟದ್ದುರು.ಪಂಚಾಕ್ಷರಿ ಹಾಲೂರು.. ಯುವ ಮೋರ್ಚಾ ಪದಾಧಿಕಾರಿಗಳಾದ ಸುನಿಲ್ ಮಣ್ಣಿಕೆರೆ. ಮನೋಜ್ ಕಿರಗುಂದ.ಅವಿನಾಶ್ ಜನ್ನಾಪುರ. ಅರುಣ್ ಕುಂಬಾರಡಿ, ಪ್ರಸಾದ್ ಹುಲ್ಲೆಮನೆ,ತಾರೇಶ್ ಜೇನುಬೈಲ್. ಪ್ರಶಾಂತ್ ಬೀಳಗುಳ. ಧನಿಕ್ ಕೊಡದಿಣ್ಣೆ ಸೇರಿದಂತೆ ಅನೇಕರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!