ಚಿಕ್ಕಮಗಳೂರು: ಲಾಸ್ಟ್ ಬೆಂಚ್ ಎಂಬ ಪರಿಕಲ್ಪನೆಯನ್ನು ತೊಡೆದುಹಾಕಲು ಕೇರಳದಲ್ಲಿ ಜಾರಿಯಾಗಿದ್ದು ಇದೀಗ ಅದೇ ರೀತಿ ಕಾಫಿನಾಡಿನಲ್ಲೂ ಹೊಸ ಮಾದರಿಯ ತರಗತಿಗಳ ಆರಂಭಕ್ಕೆ ಮುನ್ನುಡಿ ಬರೆದಿದೆ.ಹಾಗೆ ಇದೀಗ ಬಣಕಲ್ ನಲ್ಲೂ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಹೆಸರಿಗೆ ಮಂಗಳ ಹಾಡಿದ ಪ್ರೌಢ ಶಾಲೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಹೆಸರನ್ನು ಅಳಿಸಿ ಹಾಕಲು ವಿಶಿಷ್ಠ ಶಿಕ್ಷಣ ಮಾದರಿಯನ್ನು ಆರಂಭಿಸಿದೆ.
ಆರಂಭಿಕವಾಗಿ 8ನೇ ತರಗತಿಗೆ ಸೆಮಿ ಸರ್ಕಲ್ ತರಗತಿಗಳು ಆರಂಭ ಅನುಷ್ಠಾನಗೊಳಿಸಿದ್ದು ತರಗತಿಗಳನ್ನು ವೃತ್ತಾಕಾರದ ಮಾದರಿಯಲ್ಲಿ ರೂಪಿಸಲಾಗಿದ್ದು ವಿದ್ಯಾರ್ಥಿಗಳು ಅರ್ಧ ವೃತ್ತಾಕಾರದಲ್ಲಿ ಕುಳಿತುಕೊಳ್ಳುತ್ತಾರೆ.
ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಲಾಸ್ಟ್ ಬೆಂಚ್ ಟು ಫಸ್ಟ್ ಬೆಂಚ್ ಮಾದರಿ ಮಾಡಿದ ಶಿಕ್ಷಕರು ಈಗ ಎಲ್ಲಾ ಮಕ್ಕಳ ಮೇಲೂ ಗಮನ ಹರಿಸಲು ಇದು ಉಪಯುಕ್ತವಾಗಿದೆ ಎಂದರು ಇದಕ್ಕೆ ಪೋಷಕರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ