ಬೆಂಗಳೂರು : ಬಿಗ್ ಬಾಸ್ ಮನೆಯೊಳಗೆ ಯಾವಾಗ ಏನಾಗುತ್ತೆ ಅಂತ ಊಹೆ ಮಾಡಿಕೊಳ್ಳುವುದಕ್ಕೂ ಆಗೋದಿಲ್ಲ. ಅದೇ ಥರ ಯಾವಾಗ ಯಾರ್ ಮೇಲೆ ಲವ್ ಆಗುತ್ತೆ ಅಂತಾನೂ ಗೊತ್ತಾಗಲ್ಲ..!
ಮೊದಲ ವಾರದಲ್ಲಿ ಧರ್ಮ ಕೀರ್ತಿರಾಜ್‌ಗೆ ಅನಷಾ ಮೇಲೆ ಲವ್ ಆಗಿತ್ತು. ಇದರ ಜತೆಗೆ ಐಶ್ವರ್ಯಗೆ ಧರ್ಮ ಮೇಲೆ ಪ್ರೇಮ ಚಿಗುರೊಡೆದಿತ್ತು. ಆದರೆ ಈ ಬಾರಿ ವಕೀಲ್ ಸಾಬ್ ಜಗದೀಶ್ ಲವ್ವಲ್ಲಿ ಬಿದ್ದಿದ್ದಾರೆ. ರೆಬೆಲ್ ಲಾಯರ್‌ಗೆ ಕ್ಯಾಪ್ಟನ್ ಹಂಸ ಮೇಲೆ ಲವ್ ಆಗಿದೆ. bigg boss ಮನೆಯೊಳಗೆ ಎಲ್ಲರ ಮುಂದೆ i love you ಅಂತ ಹಂಸಗೆ ಕೂಗಿ ಹೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಜಗದೀಶ್, ಮುಂಗಾರು ಮಳೆ ಸಿನೆಮಾದಲ್ಲಿ ಗಣೇಶ್ ಎದೆ ಮೇಲೆ ಪೂಜಾ ಗಾಂಧಿ ಕಾಲಿಟ್ಟು ಹೋದ ರೀತಿಯಲ್ಲಿ, ಲಾಯರ್ ಜಗ್ಗ ಎದೆ ಮೇಲೆ ಹಂಸ ಕಾಲಿಟ್ಟು ಮುಂಗಾರು ಮಳೆ ಸಿನೆಮಾದ ಚಿತ್ರಣವನ್ನು ರೀಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಟನ್ ಹಂಸನಿಗೋಸ್ಕರ ʼಅವಳ ಕಣ್ಣು ನನ್ನ ಮೇಲೆ, ನನ್ನ ಕಣ್ಣು ಅವಳ ಮೇಲೆʼ ಅಂತ ಹಾಡು ಹಾಡಿ ಇಂಪ್ರೆಸ್ ಮಾಡೋದಕ್ಕೆ ಮುಂದಾಗಿದ್ದಾರೆ. ಇದು ಮುಂದೆ ಯಾವ ರೀತಿ ಡೆವಲಪ್ ಆಗುತ್ತೋ ಅನ್ನೋದು ಜನರಿಗಿರುವ ಕುತೂಹಲ.
The elegance in your writing is apparent in every line, creating a sense of harmony that lingers.