ಚಿಕ್ಕಮಗಳೂರು : ಪಬ್ಲಿಕ್ ಇಂಪ್ಯಾಕ್ಟ್ ವತಿಯಿಂದ ಸೆಪ್ಟೆಂಬರ್ 29ರಂದು ಮೂಡಿಗೆರೆಯಲ್ಲಿ ಹಮ್ಮಿಕೊಂಡಿರುವ ಜಿಲ್ಲಾ, ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಅವಧೂತ ವಿನಯ್ ಗುರೂಜಿ ಶುಭಕೋರಿದ್ದಾರೆ.
ಕ್ರೀಡಾಕೂಟಕ್ಕೆ ಆಗಮಿಸುವಂತೆ ಪಬ್ಲಿಕ್ ಇಂಪ್ಯಾಕ್ಟ್ ಬಳಗದಿಂದ ವಿನಯ್ ಗುರೂಜಿಯವರನ್ನು ಆಹ್ವಾನಿಸಲಾಯಿತು. ಈ ವೇಳೆ ನಮ್ಮ ತಂಡದ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಧ್ಯಮವಾಗಿ ಸುದ್ದಿ, ಚರ್ಚಾ ಕಾರ್ಯಕ್ರಮವನ್ನು ಮಾತ್ರ ಬಿತ್ತರಿಸದೆ, ಇಂತಹ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿರುವುದು ಹೊಸತನಕ್ಕೆ ಸಾಕ್ಷಿಯಾಗಿದೆ ಎಂದರು.
ಪಬ್ಲಿಕ್ ಇಂಪ್ಯಾಕ್ಟ್ ಹೊಸತನ್ನು ಮಾಡುವುದರಲ್ಲಿ ಎತ್ತಿದ ಕೈ. ಆಧುನಿಕ ಕ್ರೀಡೆಗಳ ಬಗ್ಗೆ ಜನ ಮಾರು ಹೋಗುತ್ತಿರುವ ಇಂದಿನ ದಿನದಲ್ಲಿ ದೇಶೀಯ ಕಲೆಗಳನ್ನು ನಾವು ಪ್ರೋತ್ಸಾಹಿಸಬೇಕು. ದೇಶಿಯ ಕಲೆ, ಆಚರಣೆ, ಕ್ರೀಡೆಗಳ ಬಗ್ಗೆ ನಮ್ಮ ಆಸಕ್ತಿ ಕಡಿಮೆಯಾಗಬಾರದು. ರಾಜ್ಯ, ಜಿಲ್ಲೆಯ ಸೊಗಡನ್ನು ಎಲ್ಲೆಡೆ ಹಂಚುವ ಸಲುವಾಗಿ ಈ ಕಾರ್ಯ್ರಕ್ರ ಹಮ್ಮಿಕೊಳ್ಳಲಾಗಿದೆ. ಮಣ್ಣಿನ ಜತೆಗೆ ನಾವು ಬೆರೆತಾಗ ನಮ್ಮ ಕಾಯಿಲೆಗಳೆಲ್ಲ ವಾಸಿಯಾಗುತ್ತವೆ. ಒತ್ತಡದಿಂದಾಗಿ ನಮ್ಮಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂಥ ಕ್ರೀಡಾಕೂಟದಲ್ಲಿ ನಾವು ತೊಡಗಿಸಿಕೊಂಡಾಗ ನಮ್ಮಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ. ಮಾನಸಿಕ ವಿಕಸನಕ್ಕೆ ದಾರಿಯಾಗುತ್ತದೆ. ಪಬ್ಲಿಕ್ ಇಂಪ್ಯಾಕ್ಟ್ ಜತೆಗೆ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಕರಿಸಬೇಕೆಂದು ಕೋರಿದರು.
