Advertisement

Homeಇತರೆಶೃಂಗೇರಿ: ಅಧಿಕಾರಿಗಳ ಲಂಚತನಕ್ಕೆ ಹೆದರಿ ದಯಾಮರಣ ಕೋರಿ ಡಿಸಿಗೆ ಪತ್ರ ಬರೆದ ವೃದ್ಧೆ!

ಶೃಂಗೇರಿ: ಅಧಿಕಾರಿಗಳ ಲಂಚತನಕ್ಕೆ ಹೆದರಿ ದಯಾಮರಣ ಕೋರಿ ಡಿಸಿಗೆ ಪತ್ರ ಬರೆದ ವೃದ್ಧೆ!

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಅಂಗನವಾಡಿ ಶಿಕ್ಷಕಿ ನಾಗರತ್ನ ಕೆ ಎಸ್ ಜಿಲ್ಲಾಧಿಕಾರಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಹೌದು ಅಲ್ಲಿನ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೋಸದಿಂದಾಗಿ ಸುಸ್ತಾಗಿ ಬಳಲಿ ಬೇಸತ್ತು ಈ ನಿರ್ಧಾರ ಕೈಗೊಂಡಿರುವ ನಾಗರತ್ನ ಅವರು ಈ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು

ಏನಿದು ಘಟನೆ, ಯಾರಿದು ನಾಗರತ್ನ ಇಲ್ಲಿದೆ ನೋಡಿ:

ನಾಗರತ್ನ ಎಂಬುವರು ಒಂಟಿಯಾಗಿರುವುದರಿಂದ ತನ್ನ ಅಕ್ಕನ ಮಗನಾದ ಕೆ ಆರ್ ನಟೇಶ್ ರವರ ಮನೆಯಲ್ಲಿ 2019 ರಿಂದ ವಾಸವಿದ್ದು ಅವರ ದತ್ತು ತಾಯಿಯಾದ ಮಹಾಲಕ್ಷ ಅವರ ಮರಣ ಪತ್ರದ ವಿಲ್ ಪ್ರಕಾರ ಅವರ ಹೆಸರಿನಲ್ಲಿದ್ದ ಮನೆ 2007ರಲ್ಲಿ ನಾಗರತ್ನ ಅವರ ಹೆಸರಿಗೆ ವರ್ಗಾವಣೆಗೊಂಡಿರುತ್ತದೆ

ಆದರೆ 2009ರ ಮಹಾಮಳೆಗೆ ಮನೆಯು ಬಿದ್ದು ಹೋದ ಕಾರಣ ದಿನಾಂಕ 29.01.2024 ರಂದು ಪಂಚಾಯಿತಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ತಕರಾರು ಬಂದ ಕಾರಣ ಗ್ರಾಮ ಪಂಚಾಯತಿಯವರು ಕಾನೂನು ಸಲಹೆಗೆ ಗ್ರಾಮ ಪಂಚಾಯಿತಿಯ ವಕೀಲರಿಗೆ ಕಳುಹಿಸಿದ್ದರು. ವಕೀಲರು ಕೊಟ್ಟ ಕಾನೂನು ಸಲಹೆ ಪತ್ರದಲ್ಲಿ ಈ ನಿವೇಶನ ಸಂಪೂರ್ಣ ಮಾಲೀಕತ್ವ ನಾಗರತ್ನ ರವರದ್ದೆ ಆಗಿತ್ತು ವೃದ್ದೆಯ ಹೆಸರಿನ ಈ ಸ್ವತ್ತನ್ನು ದಾಖಲಿಸಬಹುದು ಎಂದು ತಿಳಿಸಿದ ಈ ಕಾನೂನು ಸಲಹೆಯನ್ನು ಆಧರಿಸಿ ಮರ್ಕಲ್ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಾಗರತ್ನ ರವರಿಗೆ ಈ ಸ್ವತ್ತು ನೀಡಬೇಕೆಂದು ಸರ್ವಾನುಮತದಿಂದ ಅನುಮೋದನೆಗೊಂಡಿತ್ತು

ಮರ್ಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹೇಶ್ ದಿನಾಂಕ 1- 9- 2018 ರಂದು ನಿವೇಶನಗೆ ಸರ್ವೆಗೆ ಪಿಡಿಒ ಬರಲು 5,000 ಬೇಕೆಂದು ವೃದ್ದೆಯ ಅಕ್ಕನ ಪತ್ನಿ ಶಿಲ್ಪ ರವರ ಅಕೌಂಟಿಂದ ಫೋನ್ ಪೇ ಮಾಡಿಸಿಕೊಂಡಿದ್ದು ಮತ್ತೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪುನಃ ಪಿಡಿಓ ಗೆ ದುಡ್ಡ ಕೊಡಬೇಕೆಂದು ರೂ.2000 ನೀಡಬೇಕೆಂದು ಹೇಳಿದ್ದರು ಆದರೆ ನಾಗರತ್ನ ಇನ್ನು ನನ್ನ ಬಳಿ ಹಣ ಇಲ್ಲ ಎಂದಿದ್ದಾರೆ ಇದಕ್ಕೆ ರಘುವೀರ್ ಕೇವಲ ಅರ್ಧ ಗುಂಟೆ ಜಾಗಕ್ಕೆ ಮಾತ್ರ ಈ ಸ್ವತ್ತು ಮಾಡಿದ್ದಾನೆ ಇದರಿಂದ ಬೇಸತ್ತು ನಾಗರತ್ನ ಪಂಚಾಯತಿ ವಿರುದ್ಧವೇ ಕಾನೂನು ಸಲಹ ಮಂಡಳಿ ಶೃಂಗೇರಿಗೆ ಅರ್ಜಿ ಸಲ್ಲಿಸಿದರು

ನಂತರ ರಘುವೀರ್ ತಮ್ಮಿಂದ ತಪ್ಪಾಗಿರೋದು ಹಾಗೆಯೆ ನಿವೇಶನ ಅಳತೆಯನ್ನು ಸರಿಪಡಿಸಿ ಕೊಡುದಾಗಿ ತಿಳಿಸಿದರು ಆದರೆ ಅಷ್ಟರಲ್ಲೇ ಅವರು ಸೇವೆಯ ಅಮಾನತುಗೊಂಡರು ದಿನಾಂಕ 22- 5- 2018 25 ರಂದು ನ್ಯಾಯಾಲಯದಲ್ಲಿ ಸದರಿ ಮರ್ಕಲ್ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ್ ರವರು ಈ ನಿವೇಶನವನ್ನು ಸಂಪೂರ್ಣ ಸಭೆ ಮಾಡಿ ಇ ಸತ್ತು ಮಾಡಿಕೊಂಡು ಮುಂದಿನ ಕಾಲಾವಕಾಶ ಕೇಳಿದ್ದರೂ ಅದರಂತೆ 24-6- 2025 ರಂದು ವೃದ್ದೆಯ ನಿವೇಶನಕ್ಕೆ ಸರ್ವೆ ಮಾಡಲು ಬಂದಿದ್ದರು ಆದರೆ ಈ ಮಹಾನುಭಾವ ಹಿಂದಿನ ಪಿಡಿಒ ಮಾಡಿದ್ದ ಅರ್ಧ ಗುಂಟೆ ಯನ್ನ ವಜಾ ಮಾಡಿದ್ದಾನೆ.. ಈ ಸಂದರ್ಭದಲ್ಲಿ ಪಿಡಿಓ ತಮ್ಮ ಜೊತೆಗೆ ವಿನಾಯಕ ಶಾಸ್ತ್ರಿ ಹೊಸಕೊಪ್ಪ ಅವರು ಸಂಬಂಧಿ ಲಲಿತಾಕ್ಷಿ ಎಂಬುವರನ್ನ ಕರೆ ತಂದಿದ್ದರು ಇವರು ನಾಗರತ್ನದ ದೂರ ಸಂಬಂಧಿಗಳು ಆದರೆ ಇವರಿಗೆ ಜಾಗದಲ್ಲಿ ಹಕ್ಕು ಇಲ್ಲ ಎಂದಿದ್ದರು.

ಪಿಡಿಒ ಲಕ್ಷ್ಮಣ್ ವೃದ್ದೆಯ ಹೆಸರಿನಲ್ಲಿರುವ ನಿವೇಶನವನ್ನು ವಿನಾಯಕ ಶಾಸ್ತ್ರ ಹೊಸಕೊಟ್ಟ ಹೆಸರಿಗೆ ಬರೆದು ಕೊಡಬೇಕಾಗಿ ಬೆದರಿಕೆ ಹಾಕಿ ಎಲ್ಲರೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಾಗರತ್ನ ಆರೋಪಿಸಿದ್ದಾರೆ

ಸದ್ಯ ಬ್ರೈನ್ ಟೂಮರ್ ನಿಂದ ಬಳಸುಳುತ್ರುತಿರುವ ನಾಗರತ್ನರಿಗೆ ಯಾವುದೇ ವರಮಾನ ಇಲ್ಲ ಹಾಘೆ ದಾಖಲೆಗಳು ಮಾಡಿಕೊಡಲು ಲಂಚ ಸಹ ಕೇಳುತ್ತಿದ್ದಾರೆ ಎಂದು ಮನನೊಂದು ಜಿಲ್ಲಾಧಿಕಾರಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!