ತಿರುಪತಿ : ತಿರುಪತಿಯಲ್ಲಿ ದೇವರ ದರ್ಶನ ಟಿಕೆಟ್ ಖರೀದಿ ವೇಳೆ ಕಾಲ್ತುಳಿತ ಸಂಭವಿಸಿ 06 ಮಂದಿ ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿದ್ದರು. ಈ ನಡುವೆ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಕಳೆಗಟ್ಟಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ಶುಕ್ರವಾರ ವೆಂಕಟೇಶ್ವರನ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲಾಯಿತು.
ಗಾಯಾಳುಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡುವಂತೆ ಸಿಎಂ ಚಂದ್ರಬಾಬು ನಾಯ್ಡು ಸೂಚಿಸಿದ್ದರು. ಅದರಂತೆ 52 ಗಾಯಾಳುಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ(ಟಿಟಿಡಿ) ವೈಕುಂಠ ದ್ವಾರ ಪ್ರವೇಶದ ವ್ಯವಸ್ಥೆ ಮಾಡಿತ್ತು. ದರ್ಶನದ ಬಳಿಕ ವಾಹನ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ಕಳುಹಿಸಲಾಯಿತು.
ತಿರುಪತಿಯಲ್ಲಿ ಕಾಲ್ತುಳಿತ ಪ್ರಕರಣ – ಗಾಯಗೊಂಡ ಭಕ್ತರಿಗೆ ಸರ್ಕಾರದಿಂದ ವಿಶೇಷ ದರ್ಶನ..!
RELATED ARTICLES
