ಬಳ್ಳಾರಿ; ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅವರನ್ನು ಅವರ ಪುತ್ರ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮೀ ದರ್ಶನ್ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ವೇಳೆ ದರ್ಶನ್ ಪರವಾದ ವಕೀಲರು ಕೂಡ ಜೊತೆಗಿದ್ದರು.
ಜೈಲಿನ ಸಂದರ್ಶಕರ ಕೊಠಡಿಯಲ್ಲಿ ದರ್ಶನ್ ಪುತ್ರ, ಪತ್ನಿ ಹಾಗೂ ವಕೀಲರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇನ್ನು ಭೇಟಿ ವೇಳೆ ನಟ ದರ್ಶನ್ ಮಗ ವಿನೀಶ್ ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.ಅಲ್ಲದೇ ಭಾವುಕರಾದ ಪತ್ನಿಗೆ ದರ್ಶನ್ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ವಕೀಲರ ಜೊತೆ ಕೂಡ ದರ್ಶನ್ ಕೇಸ್ ಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ವಿಜಯಲಕ್ಷ್ಮೀ ದರ್ಶನ್ ಅವರು ಜೈಲಿನ ಬಳಿ ಬರುತ್ತಿದ್ದಂತೆ ಅವರನ್ನು ನೋಡಲು ಕಾರಿನ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು ಎನ್ನಲಾಗಿದೆ. ಇನ್ನು ಪತ್ನಿ ಹಾಗೂ ಮಗನ ಜೊತೆ ಮಾತನಾಡಿದ ಬಳಿಕ ದರ್ಶನ್ ನೇರವಾಗಿ ತಮ್ಮ ಸೆಲ್ ಗೆ ತೆರಳಿದ್ದಾರೆ.