ಬೆಂಗಳೂರು : ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯದ ಬೆಳವಣಿಗೆಯಲ್ಲಿ ಅನುಷಾ ಹಾಗೆ ಧರ್ಮಕೀರ್ತಿ ರಾಜ್ ಒಂದು ಟ್ರ್ಯಾಕ್‌ನಲ್ಲಿ ಹೋಗ್ತಿದ್ದಾರೆ. ಈ ಮಧ್ಯದಲ್ಲಿ ಮೂರನೇ ವ್ಯಕ್ತಿಯ ಎಂಟ್ರಿ ಆಗಿದೆ.
ಮೂರನೇ ವ್ಯಕ್ತಿ ಬೇರೆ ಯಾರೂ ಅಲ್ಲ, ಆಕೆ ಐಶ್ವರ್ಯ. ಧರ್ಮಕೀರ್ತಿ ರಾಜ್‌ಗೆ ಕಾಳು ಹಾಕೋಕೆ ಐಶ್ವರ್ಯ ಶುರುಮಾಡಿದ್ದಾರೆ. ಅನುಷಾ ಮತ್ತು ಧರ್ಮ ರೆಸ್ಟ್ ರೂಂಗೆ ಹೋಗಿ ಬಂದ್ಮೇಲೆ ಧರ್ಮನಿಗೆ ಐಶ್ವರ್ಯ ನೀವು ತುಂಬಾ ಒಳ್ಳೇವ್ರು… ನೀವು ಫ್ರೂಟ್ಸ್‌ನ ತುಂಬಾ ಮುದ್ದಾಗಿ ಕಟ್ ಮಾಡ್ತೀರಾ… ಅಂತೆಲ್ಲ ಹೇಳಿ ಪುಸಲಾಯಿಸ್ತಿದ್ದಾರೆ.
ಇದಕ್ಕೆ ರಿಯಾಕ್ಟ್ ಮಾಡಿರುವ ಅನುಷಾ, ನೀವು ನರಕ ನಿವಾಸಿಗಳ ಹತ್ರ ಬಂದ್ರೆ ಐಶುಗೆ ಆಗಲ್ಲ ಅಲ್ವಾ ಅಂತ ಕೇಳಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯೊಳಗೆ ಮೊದಲ ವಾರವೇ ಲವ್ ಸ್ಟೋರಿ ಶುರುವಾಗಿದೆ. ಇದು ಎಷ್ಟು ದಿನ, ಹೇಗೆಲ್ಲಾ ಸಾಗುತ್ತೆ… ಯಾರ್ಯಾರು ಯಾರ್ಯಾರ ನಡುವೆ ಎಂಟ್ರಿ ಕೊಡ್ತಾರೆ, ಯಾರ ಒಲವು ಯಾರ್ ಕಡೆ ತಿರುಗುತ್ತೆ ಅಂತೆಲ್ಲ ವೀಕ್ಷಕರು ತಮ್ಮದೇ ಆದ ಆಯಾಮದಲ್ಲಿ ಲೆಕ್ಕಾಚಾರ ಹಾಕೊಳ್ತಿದ್ದಾರೆ.




