ಪಬ್ಲಿಕ್ ಇಂಪ್ಯಾಕ್ಟ್ ಬೆಂಗಳೂರು : ನಮಗೆ ಸಂವಿಧಾನ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಅದರ ಪ್ರಕಾರ ಅರ್ಥಪೂರ್ಣವಾಗಿ ಮಾತನಾಡುವ ಅವಕಾಶವಿದೆ. ಜತೆಗೆ ಹಂಸಲೇಖ ಥರ ಅಸಂಬದ್ಧವಾಗಿ ಮಾತನಾಡುವ ಹಕ್ಕಿದೆ ಅಂತ ನಟ ಚೇತನ್ ಹೇಳಿದ್ದಾರೆ.
ಪ್ರತಿ ಬ್ರಾಹ್ಮಣರ ಮನೆಯಲ್ಲೂ ಭಗವದ್ಗೀತೆಯ ಪಕ್ಕದಲ್ಲಿ RSSನ ‘ಚಿಂತನ ಗಂಗಾ’ ಪುಸ್ತಕವನ್ನು ಇಡಲಾಗಿತ್ತು ಎಂದು ಹೇಳಿರುವ ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಿರುವ ಚೇತನ್, ಅವರದ್ದು ತಪ್ಪು ವ್ಯಾಖ್ಯಾನ. ಕಳೆದ ಶತಮಾನದಲ್ಲಿ, ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಹೋರಾಡಿದ ಸಮಾನತಾವಾದಿ ಬ್ರಾಹ್ಮಣರು ಮತ್ತು ಕಮ್ಯುನಿಸ್ಟ್ ಬ್ರಾಹ್ಮಣರಂತಹ ಅನೇಕ ಬ್ರಾಹ್ಮಣರು ಆ 2 ಪುಸ್ತಕಗಳಲ್ಲಿ ಯಾವುದಕ್ಕೂ ಚಂದಾದಾರರಾಗಿರಲಿಲ್ಲ ಎಂದಿದ್ದಾರೆ.
ಮುಂದುವರೆದು, ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ, ನಮಗೆಲ್ಲರಿಗೂ ಅರ್ಥಪೂರ್ಣವಾಗಿ ಮತ್ತು ಹಂಸಲೇಖವರ ತರ ಅಸಂಬದ್ಧವಾಗಿ ಮಾತನಾಡುವ ಹಕ್ಕಿದೆ ಅಂತ ಹಂಸಲೇಖ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.
