ಚಿಕ್ಕಮಗಳೂರು: ಬನ್ನೂರು ಹಾಗೂ ಅಂಡವಾನೆ ಗ್ರಾಮದಲ್ಲಿ ಇಬ್ಬರನ್ನ ಬಲಿ ಪಡೆದಿದ್ದ ಪುಂಡಾನೆ ಕೊನೆಗೂ ಸೆರೆಯಾಗಿದೆ. 4 ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದ್ದರಿಂದ ನಿನ್ನೆ ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
4 ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದ್ದರಿಂದ ಸೋಮವಾರ (ಜುಲೈ28)ರಂದು ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸದ್ಯ ಪುಂಡಾನೆ ಸೆರೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಸುತ್ತಮುತ್ತಲಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಬನ್ನೂರು ಗ್ರಾಮದಲ್ಲಿ ಕಳೆದ ಬುಧವಾರ ರಾತ್ರಿಯಷ್ಟೇ ಕಾಡಾನೆಯೊಂದು ಅನಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯನ್ನು ಸಾಯಿಸಿತ್ತು. ಮಹಿಳೆ ಮೃತಪಟ್ಟ ಬಳಿಕ ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಬೃಹತ್ ಪ್ರತಿ ಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಐದು ದಿನಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ ಮತ್ತೋರ್ವ ಸುಬ್ಬೇಗೌಡ ಎನ್ನುವವರು ಬಲಿಯಾಗಿದ್ರು.
ಹೀಗಾಗಿ ನಿನ್ನೆ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಅಲರ್ಟ್ ಆದ ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ಕುಮ್ಕಿಯ ನಾಲ್ಕು ಆನೆಗಳು ಕಾಡಾನೆ ಸೆರೆಗೆ ಮುಂದಾಗಿದ್ದವು. ನಿನ್ನೆ ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭವಾಗಿತ್ತು. ಒಂದು ಪುಂಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ತಪ್ಪಿಸಿಕೊಂಡು ಎರಡೇ ಬಾರಿ ಅರಿವಳಿಕೆ ಚುಚ್ಚುಮದ್ದಿಗೆ ಆನೆ ಬಿದ್ದಿದ್ದು, ಅಲ್ಲಿಂದ ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.