ಮೂಡಿಗೆರೆ: ಕಾಡು ಹಂದಿ ದಾಳಿಗೆ ರೈತನ ಬೆರಳು ಕಟ್ಟಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಬೀಳಿದ ಅಲೆಖಾನ್ ಗ್ರಾಮದಲ್ಲಿ ನಡೆದಿದೆ. ರೈತ ಉಪೇಂದ್ರ ಎಂಬುವರು ದನಗಳನ್ನ ಕಾಡಿಗೆ ಮೇಯಿಸಲು ಹೋದಾಗ ನಡೆದ ದುರಂತವಾಗಿದ್ದು ಆತನ ಕೈ ಹೆಬ್ಬೇರಳೇ ಕಟ್ ಆಗಿದೆ.

ದನಗಳನ್ನು ಮೇಯಿಸಿ ಹಿಂತಿರುಗುತ್ತಿದ್ದ ವೇಳೆ ಕಾಡು ಹಂದಿ ಕೈ ಮೇಲೆ ದಾಳಿ ಮಾಡಿದ್ದು ಕೈಯ ಒಂದು ಬೆರಳನ್ನು ತೀವ್ರವಾಗಿ ಕಚ್ಚಿದ್ದ ಪರಿಣಾಮ ಬೆರಳು ಸಂಪೂರ್ಣವಾಗಿ ತುಂಡಾಗಿದೆ. ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.
ನಾನೊಬ್ಬ ಬಡ ರೈತನಾಗಿದ್ದು ಹೀಗೆ ಬೆರಳು ಕಟ್ ಆದ ಮೇಲೆ ಕೆಲಸ ಮಾಡಲು ಆಗ್ತಿಲ್ಲ ಹಾಗೆ ಮೊದಲಿನ ಹಾಗೆ ಸಾಮರ್ಥ್ಯವೂ ಕಡಿಮೆಯಾಗಿದೆ.ಸರ್ಕಾರ ಹಾಗೂ ಅರಣ್ಯ ಇಲಾಖೆ ಪರಿಹಾರ ಒದಗಿಸಬೇಕು, ನನ್ನ ಕುಟುಂಬ ನಿರೀಕ್ಷೆಯಲ್ಲಿದೆ ಎಂದು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮಸ್ಥರು ಕೂಡ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಕಾಡು ಮೃಗಗಳ ಹಾವಳಿಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಲಿ ಹಾಗೂ ಸರಿಯಾದ ಗಸ್ತು ವ್ಯವಸ್ಥೆ ಮಾಡಲಿ ಎಂದು ಆಗ್ರಹಿಸಿದರು.