Sunday, August 3, 2025
!-- afp header code starts here -->
Homeವನ್ಯ ಜೀವಿಕಳಸ: ಮಾನವ- ವನ್ಯಜೀವಿಗಳ ಸಂಘರ್ಷ ತಡೆಯಲು ಸೌರಶಕ್ತಿ ಬೇಲಿ ನಿರ್ಮಾಣ!

ಕಳಸ: ಮಾನವ- ವನ್ಯಜೀವಿಗಳ ಸಂಘರ್ಷ ತಡೆಯಲು ಸೌರಶಕ್ತಿ ಬೇಲಿ ನಿರ್ಮಾಣ!

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿರುವ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು ರೈತರ ಬೆಳೆಗಳಿಗೂ ಹಾಗೂ ಮನುಷ್ಯನ ಜೀವಕ್ಕೂ ಅಪಾಯ ಹೆಚ್ಚಾಗಿದೆ. ಈ ಪರಿಸ್ಥಿತಿಗೆ ತಾತ್ಕಾಲಿಕ ಪರಿಹಾರವಿಲ್ಲದೇ ಮಾನವ – ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮುದಾಯ ಆಧಾರಿತ ಸೌರಶಕ್ತಿ ಬೇಲಿಯನ್ನು ನಿರ್ಮಾಣ ಮಾಡಲು ಅನುಷ್ಠಾನಗೊಳಿಸಿಲು ಮುಂದಾಗಿದೆ.

ಈ ಯೋಜನಡಿಯಲ್ಲಿ ರೈತರು ಅಥವಾ ಗ್ರಾಮ ಸಮುದಾಯಗಳು ತಮ್ಮ ಜಮೀನಿಗೆ ಸೌರ ಶಕ್ತಿ ಬೇಲಿಯನ್ನು ನಿರ್ಮಿಸಿಕೊಳ್ಳಲು ಸರ್ಕಾರದಿಂದ ಶೇಕಡಾ 50% ಅನುದಾನ ನೀಡಲಾಗುತ್ತದೆ. ಈ ಯೋಜನೆಯ ಸಂಪೂರ್ಣ ವೆಚ್ಚದ ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾಯಿಸಲಾಗುವುದು

ಈ ಹಿಂದೆ ವಯಕ್ತಿಕ ರೀತಿಯಲ್ಲಿ ಸೌರಶಕ್ತಿ ಬೇಲಿ ನಿರ್ಮಾಣದ ಯೋಜನೆ ಜಾರಿಗೆ ತಂದಿದ್ದರು. ರೈತರಿಗೆ ಅದು ಅನುಷ್ಠಾನಗೊಳಿಸುವುದು ಕಷ್ಟವಾಗಿತ್ತು. ಇದನ್ನ ಗಮನಿಸಿದ ಸರ್ಕಾರ ಸಮುದಾಯ ಆಧಾರಿತ ಬೇಲಿ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದೆ.

ಹೆಚ್ಚಿನ ಮಾಹಿತಿಗೆ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು: 9481992407

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!