ಕಳಸ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದೆಡೆ ಕಾಡಾನೆಗಳ ಉಪಟಳವಾದರೆ ಮತ್ತೊಂದೆಡೆ ಕಾಡುಕೋಣಗಳು ಹಿಂಡು ಹಿಂಡಾಗಿ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು ಜನ ಅರಣ್ಯ ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನ ಕಳಸ ಹಳುವಳ್ಳಿ, ತಂಬಿಕುಡಿಗೆ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಂಡು ಬಂದಿದೆ. ಹೀಗಾಗಿ ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಈಗಾಗಲೇ ಕಾಡುಕೋಣ ದಾಳಿಗೆ ಜೀವ ಹಾನಿಗಳು ಸಂಭವಿಸಿದ್ದು ಅರಣ್ಯ ಇಲಾಖೆ ಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಹೋರಾಟ ನಡೆಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಮೂಡಿಗೆರೆ: ತಾಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ 30ಕ್ಕೂ ಹೆಚ್ಚು ಕಾಡಾನೆಗಳು ಕತ್ತಲಾಗುತ್ತಿದ್ದಂತೆ ಓಡಾಡಲು ಪ್ರಾರಂಭಿಸಿದ್ದು ಜಾಗರಖಾನ್ ಕಾಡಿನಿಂದ ಮಣ್ಣಿಕೆರೆ, ಶುಭನಗರ, ಚಂದ್ರಪುರ ಕಡೆಗೆ ಸಂಚರಿಸುತ್ತಿದ್ದು. ಚಂದ್ರಪುರ, ಶುಭನಗರ, ಮಣ್ಣಿಕೆರೆ, ಹೊಯ್ಸಳ, ನಿಡಗೋಡು, ಕಮ್ಮರಗೋಡು, ಮಾಕೋನಹಳ್ಳಿ, ಹಳಸೆ, ದುಂಡುಗ, ಹೊರಟ್ಟಿ, ಬಾರದಹಳ್ಳಿ ಈ ಗ್ರಾಮದ ಸುತ್ತ ಇರುವ ಗ್ರಾಮಸ್ಥರು ಹಾಗೂ ವಾಹನ ಸವಾರರು ಯಾರೂ ಕೂಡ ಹಳಸೆ – ಕುನ್ನಹಳ್ಳಿ-ಜನ್ನಾಪುರ – ಮಣ್ಣಿಕೆರೆ ಈ ರಸ್ತೆಯಲ್ಲಿ ಓಡಾಡಬಾರದು. ಬಹಳ ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಸೂಚನೆ ನೀಡಲಾಗಿದೆ.