ಚಿಕ್ಕಮಗಳೂರು: ರೈತನ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
63 ವರ್ಷದ ಫಿಲಿಪ್ ಎಂಬ ವ್ಯಕ್ತಿ ಕಾಡಾನೆಯಿಂದ ಗಾಐಗೊಳಗಾಗಿದ್ದಾರೆ. ಹೌದು .. ಮಂಗಳವಾರ ಮಧ್ಯರಾತ್ರಿ ನಾಯಿ ಬೊಗುಳಿದ ಕಾರಣ ದನಗಳು ಬಂದಿರಬಹುದೆಂದು ಭಾವಿಸಿ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಏಕಾಏಕಿ ಕಾಡಾನೆಯೊಂದು ಬಂದು ದಾಳಿ ನಡೆಸಿದೆ. ಈ ವೇಳೆ ತನ್ನ ಸೊಂಡಿಲಿನಿಂದ ಫಿಲಿಪ್ ನನ್ನ ಎತ್ತಿ ಬಿಸಾಕಿದೆ.

ಕಾಡಾನೆ ದಾಳಿಯಿಂದಾಗಿ ಕಾಲು, ಎದೆ, ಕೈಗಳಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಫಿಲಿಪ್, ಮುತ್ತಿಗೆಪುರ ನಿವಾಸಿಯಾಗಿದ್ದು ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತನ್ನ ಪತ್ನಿ ಮಗನೊಂದಿಗೆ ವಾಸವಾಗಿದ್ದವರು . ದುಡಿದು ತಿನ್ನುತ್ತಿದ್ದ ಜೀವ ಈಗ ದಿಢೀರ್ ಈ ರೀತಿ ಆಗಿದ್ದರಿಂದ ಮುಂದಿನ ಹಂತದಲ್ಲಿ ಜೀವನ ನಡೆಸಲು ತುಂಬಾ ಕಷ್ಟಕರವಾಗಿದ್ದು ಆನೆ ದಾಳಿಯಿಂದಾಗಿ ಕುಟುಂಬ ತತ್ತರಿಸಿ ಹೋಗಿದೆ.
ಗ್ರಾಮದ ಸುತ್ತಾಮುತ್ತ 30ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು ಅನೇಕ ಕಾಫಿತೋಟ, ಗದ್ದೆ, ಬಾಳೆ, ಶುಂಠಿ ಬೆಳೆಗಳಿಗೆ ಹಾನಿ ಮಾಡಿವೆ ಹಾಗೆ ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ.
ಘಟನೆ ಆಗಿದ್ದರ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.