ಚಿಕ್ಕಮಗಳೂರು ನಗರಕ್ಕೆ ಒಂಟಿ ಸಲಗ ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡ ನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಚಿಕ್ಕಮಗಳೂರಿನ ಜಯನಗರದಲ್ಲಿ ಬೆಳ್ಳಂಬೆಳಿಗ್ಗೆ ಕಾಡಾನೆ ಸಂಚಾರ ನಡೆಸಿದೆ. ಚಿಕ್ಕಮಗಳೂರು ನಗರವನ್ನ ಪ್ರದಕ್ಷಿಣೆ ಹಾಕುತ್ತಿದ್ದ ಒಂಟಿಸಲಗವನ್ನು ನೋಡಿ ವಾಕಿಂಗ್ ಹೋಗುವವರು ಶಾಕ್ ಆದ್ರು.
ಜಯನಗರದಲ್ಲೇ ಸುಮಾರು ಅರ್ಧಗಂಟೆ ಒಂಟಿಸಲಗ ಓಡಾಟ ನಡೆಸಿದೆ. ಗಜರಾಜನ ವಾಕಿಂಗ್ ದೃಶ್ಯವನ್ನು ಜನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ಮಾಡ್ತಿದ್ದವರನ್ನ ನೋಡಿ ಒಂಟಿ ಸಲಗ ಘೀಳಿಡುತ್ತಿದ್ದಂತೆ ತಕ್ಷಣ ಜನ ಮನೆಯೊಳಗೆ ಓಡಿದ್ದಾರೆ. ಕಾಡಾನೆ ಬೀದಿಯಲ್ಲಿದ್ದ ಜಾನುವಾರುಗಳನ್ನ ಅಟ್ಟಾಡಿಸಿಕೊಂಡು ಹೋಗುತ್ತಿದ್ದ ದೃಶ್ಯವೂ ಸೆರೆಯಾಗಿದೆ. ನಂತರ ಜಯನಗರದಿಂದ ತೇಗೂರು, ಮೂರು ಮನೆ ಗ್ರಾಮಕ್ಕೆ ಲಗ್ಗೆ ಇಟ್ಟಿದೆ. ಸದ್ಯ ತೇಗೂರಿನಲ್ಲಿ ಒಂಟಿ ಸಲಗ ಬೀಡುಬಿಟ್ಟಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.