ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ಬೆಳ್ಳಂಬೆಳಗ್ಗೆ ಒಂಟಿಸಲಗವೊಂದು ಪ್ರತ್ಯಕ್ಷವಾಗಿದೆ. ಇನ್ನು ಈ ಕಾಡಾನೆ ಆಜಾದ್ ನಗರ, ತರುವೆಯಲ್ಲಿ ರೌಂಡ್ಸ್ ಹಾಕಿದ್ದು ಕಾಡಾನೆ ಓಡಾಟ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.

ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ತರುವೆ ಗ್ರಾಮದಲ್ಲಿ ಮನೆ ಸಮೀಪವೇ ಕಾಡಾನೆ ಸಂಚರಿಸಿದೆ. ಒಂಟಿ ಸಲಗದ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಾಡಾನೆಯನ್ನ ಮರಳಿ ಕಾಡಿಗೆ ಓಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
