ಎನ್.ಆರ್ ಪುರ: ಕಳೆದೊಂದು ವಾರದಿಂದ ಜನವಸತಿ ಪ್ರದೇಶದಲ್ಲಿ ಸಂಚರಿಸಿ, ಆತಂಕ ಸೃಷ್ಟಿಸಿರುವ ಕಾಡಾನೆ ಬಾಳೆಹೊನ್ನೂರಿನ ಸುತ್ತಾಮುತ್ತ ಮತ್ತೆ ಕಾಡಾನೆಗಳ ಹಾವಳಿ ಉಪಟಳ ಕಂಡು ಬಂದಿದ್ದು ಜಮೀನಿಗೆ ನುಗ್ಗಿ ಅಡಿಕೆ, ಬಾಳೆಗೆ ಹಾನಿ ಮಾಡಿದೆ.
ಹೌದು .. ಶನಿವಾರ ಬೆಳಗ್ಗೆ ಬಾಳೆಹೊನ್ನೂರು ಸಮೀಪದ ಕಾನ್ಕೆರೆ, ಕಾರಬೈಲು, ಮಕ್ಕಿಮನೆ ಹಾಗೂ ಬಿ.ಕಣಬೂರು ಸುತ್ತಾಮುತ್ತ ಎರಡು ಕಾಡಾನೆಗಳು ಸಂಚರಿಸುತ್ತಿದ್ದು ಅಲ್ಲಿನ ಗ್ರಾಮಸ್ಥರು ಇದರಿಂದ ಮತ್ತೆ ಭಯಭೀತಗೊಂಡಿದ್ದಾರೆ.
ತೋಟ-ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರು ಆತಂಕಕೊಳಗಾಗಿದ್ದಾರೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಕಾಡಾನೆ ಓಡಿಸಿ ಎಂದು ಗ್ರಾಮಸ್ಥರು ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಕಾಡಾನೆ ತುಳಿತಕ್ಕೆ ರೈತ ಬಲಿಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಪಂ ಅಂಡವಾನೆ ಗ್ರಾಮದ ಸುಬ್ಬೇಗೌಡ (66) ಎನ್ನುವವರ ಮನೆ ಬಳಿಯಲ್ಲಿ ಕಾಡಾನೆ ಬಂದಿದ್ದು, ಇದನ್ನು ಕಾಡಿನತ್ತ ಓಡಿಸಲು ಆನೆಯ ಹಿಂದೆ ಹೋಗಿದ್ದಾರೆ. ಈ ವೇಳೆ ಆನೆ ಅವರ ತೋಟದ ಐಬೆಕ್ಸ್ ಬೇಲಿಗೆ ತಗುಲಿದ್ದು, ವಿದ್ಯುತ್ ಶಾಕ್ ಹೊಡೆದಾಕ್ಷಣ ಏಕಾಏಕಿ ವಾಪಸ್ ಬಂದು ದಾಳಿ ಮಾಡಿ ತುಳಿದು ಸಾಯಿಸಿದೆ ಎನ್ನಲಾಗಿದೆ.