ಭಾರತವನ್ನು ವಿಶ್ವಗುರುವನ್ನಾಗಿಸಿ ಪ್ರಪಂಚದ ಶಕ್ತಿಶಾಲಿ ರಾಷ್ಟ್ರವನ್ನಾಗಿಸುವಲ್ಲಿ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಮಹತ್ವದಾಗಿದೆ ಎಂದು ಬಸರೀಕಟ್ಟೆಯಲ್ಲಿ ನರೇಂದ್ರ ಮೋದಿಯವರ ಜನ್ಮ ದಿನದ ಸಂಭ್ರಮಾಚರಣೆಯ ವೇಳೆ ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಹೇಳಿದರು .

ರಾಷ್ಟ್ರದ ಭದ್ರತೆಯನ್ನು ಉನ್ನತಿಕರಿಸಿ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆರಿಸಿದ ಕೀರ್ತಿ ಜೊತೆಗೆ ಮೇಕ್ ಇನ್ ಇಂಡಿಯಾದ ಮೂಲಕ ತಂತ್ರಜ್ಞಾನ ಮತ್ತು ಉದ್ಯೋಗ ಯೋಜನೆಗಳ ಅಭಿವೃದ್ಧಿ , ಯುವಜನತೆಗೆ ಅನೇಕ ಉದ್ಯೋಗ ಯೋಜನೆಗಳು , ರೈತ ವರ್ಗ , ಶೈಕ್ಷಣಿಕ ಯೋಜನೆ , ನಗರಾಭಿವೃದ್ದಿ ಹೀಗೆ ಅನೇಕ ಜನಪರ ಯೋಜನೆಯ ಶಿಲ್ಪಿ ಹಾಗೂ ನಮ್ಮ ಭಾರತ ದೇಶದ ಹೆಮ್ಮೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂದರು.
ಬಸರೀಕಟ್ಟೆ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಮೋದಿಯವರ ಹೆಸರಿನಲ್ಲಿ ಪಂಚಾಮೃತ ಅಭಿಷೇಕ,ಪವಮಾನ ಅಭಿಷೇಕ , ವಿಷ್ಣು ಸಹಸ್ರನಾಮ ಪರಾಯಣ ಮಹಾಪೂಜೆ ಯನ್ನು ವೇದ ಬ್ರಹ್ಮ ಚೇತನ್ಯ ರವರು ನೇರವೇರಿಸಿ ಹರಸಿದರು .
ಬಸರೀಕಟ್ಟೆ ವೃತ್ತದಲ್ಲಿ ಪಟಾಕಿ ಸಿಡಿಸಿ , ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು .
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧರ್ಮರಾಜ್ , ಸೀತೆಗೌಡ್ರು , ಬೂತ್ ಕಮಿಟಿ ಅಧ್ಯಕ್ಷ ಪಧ್ಮನಾಭ , ಸುದರ್ಶನ ಶೆಟ್ಟಿ , ಕೃಷ್ಣ , ಸುರೇಂದ್ರ , ಸಂತೋಷ್ , ಅನಿಲ , ಶೇಷಯ್ಯ ಭರಕನಘಟ್ಟ , ಅದ್ರಾಮ್ , ಸುರೇಶ್ , ಪಯ್ಯಣ್ಣ, ಆಟೋ ಬಳಗದವರು. ಮೇರುತಿ ಗೋ ಪ್ರೇಮಿ ಬಳಗದ ಅಧ್ಯಕ್ಷ ಸುಧೀಂದ್ರ ಮಲ್ಲಂಪಾಲ್ ಹಾಗೂ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶಶಿ ಬೆತ್ತದಕೊಳಲು
