ಜಯಪುರ: ಕಳೆದ ವಾರ ಸುರಿದ ಮಳೆಗೆ ನೀರು ನುಗ್ಗಿ ರಸ್ತೆ ಪಕ್ಕದಲ್ಲಿ ಕುಸಿದು ಸಂಪೂರ್ಣ ರಸ್ತೆಯೇ ಕುಸಿಯುವ ಸ್ಥಿತಿ ಎದುರಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಇಲಾಖೆಯ ಇಂಜಿನಿಯರ್ ಗಳು ನೋಡಿಕೊಂಡು ಹೋಗಿದ್ದರು. ಈ ಬಗ್ಗೆ ಪಬ್ಲಿಕ್ ಇಂಪ್ಯಾಕ್ಟ್ ವರದಿ ಪ್ರಸಾರ ಮಾಡಿತ್ತು.

ಹೌದು .. ಮಳೆಯೂ ಜೋರಾಗಿ ಇದ್ದಿದ್ದರಿಂದ ಹಾಗೂ ರಸ್ತೆಯೂ ಕುಸಿಯುತ್ತಿದ್ದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ ಆದರೆ ಈಗ ಮಳೆ ಬಿಟ್ಟಿರುವುದರಿಂದ ರಸ್ತೆಯ ಮಣ್ಣು ಹಾಗೂ ಕಲ್ಲುಗಳನ್ನು ಟ್ರಾಕ್ಟರ್ ಹಾಗೂ ಜೆಸಿಬಿ ಬಳಸಿ ಕೆಲಸ ಮಾಡಿ ರಸ್ತೆ ಮತ್ತೆ ಕುಸಿಯದಂತೆ ಪೈಪ್ ಹಾಕಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೊಪ್ಪ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಸುನೀಲ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶೋಕ್, ಅತ್ತಿಕುಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಟ ಹಾಗೂ ಗ್ರಾಮಸ್ಥರ ಸಹಕಾರದಿಂದ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ.
