Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಒಪನ್ ಥಿಯೇಟರ್ ನಿರ್ಮಾಣ

ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಒಪನ್ ಥಿಯೇಟರ್ ನಿರ್ಮಾಣ

ಚಿಕ್ಕಮಗಳೂರು: ಪ್ರತಿಷ್ಠಿತ ಬ್ರಿಗೇಡ್ ಕಂಪನಿಯವರು 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಒಪನ್ ಥಿಯೇಟರ್ ನಿರ್ಮಾಣ ಮಾಡುತ್ತಿದ್ದಾರೆ.

ಹೊಸಮನೆ ವೃತ್ತದಲ್ಲಿ ನಿರ್ಮಾಣವಾಗುತ್ತಿದ್ದು ಹಿಂಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಾರತದ ಪಿತಾಮಹ ಮಹಾತ್ಮ ಗಾಂಧಿಜೀಯವರ ಭಾವಚಿತ್ರ ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ನಿರ್ಮಿಸಿ ಸದಾಕಾಲವೂ ಬೆಳಕು ಹರಿಸುವುದರ ಮೂಲಕ ಜನರ ಆಕರ್ಷಣೆ ಜೊತೆಗೆ ಸ್ಮರಿಸುವಂತೆ ಮಾಡುತ್ತಿದ್ದಾರೆ.

ಬಹು ಎತ್ತರದಲ್ಲಿ ಕ್ಲಾಕ್ ಟವರ್ ಕೂಡ ನಿರ್ಮಾಣ ಮಾಡುತ್ತಿದ್ದು ಪ್ರತಿ ಗಂಟೆಗೆ ಶಬ್ದ ಬಾರಿಸುವಂತೆ ಮಾಡುವುದು ಸೇರಿದಂತೆ ಆಕರ್ಷಣೆ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ.ಬಹು ಬೆಲೆ ಬಾಳುವ ಕಲ್ಲುಗಳನ್ನು ಬಳಸಲಾಗಿದೆ.ಇದರ ನಿರ್ಮಾಣಕ್ಕೆ ಕಳೆದ ಒಂಬತ್ತು ತಿಂಗಳಿಂದ ನೂರಾರು ನೂರಿತ ಕೆಲಸಗಾರರು ಶ್ರಮಿಸುತ್ತಿದ್ದಾರೆ

8 ಸಾವಿರ ಚದುರ ಅಡಿ ವಿಸ್ತಾರವಾದ ಜಾಗದಲ್ಲಿನಿರ್ಮಾಣವಾಗುತ್ತಿದ್ದು ಕೆಫೆ ಕೂಡ ಇರುವುದರಿಂದ ಜನ ಅದರಲ್ಲೂ ಕುಟುಂಬ, ಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಹೋರಾಟಗಾರರ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶ ಮೆಚ್ಚಲೇ ಬೇಕು. ಚಿಕ್ಕಮಗಳೂರಿನ ಆಕರ್ಷಣ ಕೇಂದ್ರವಾಗಲು ಬಹು ಕೋಟಿ ರೂಪಾಯಿಗಳ ವೆಚ್ಚ ಮಾಡುತ್ತಿರುವ ಬ್ರಿಗೇಡ್ ಗ್ರೂಪ್‌ನವರನ್ನು ಶ್ಲಾಘಿಸ ಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!