ಎನ್ ಆರ್ ಪುರ: ಜಿಎಸ್ ಟಿ ಏರಿಸಿದ್ದು ಅವರೇ ಇಳಿಸಿದ್ದು ಅವರೇ ಯಾವ ಖುಷಿಗೆ ಈಗ ಸಂಭ್ರಮಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೇರೂರು ಗ್ರಾಮ ಪಂಚಾಯತಿ ಸದಸ್ಯ ಪ್ರವೀಣ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕೆ ಹೇಳಿಕೆ ನೀಡಿದ ಅವರು ಜನರ ಮೇಲೆ ಜಿಎಸ್ ಟಿ ಎಂಬ ಬರೆ ಹಾಕಿ ಹಲವು ವರ್ಷಗಳ ಬಳಿಕ ಅಲ್ಪ ಪ್ರಮಾಣದ ಜಿಎಸ್ ಟಿ ತೆರಿಗೆಯನ್ನು ಇಳಿಸಿದ್ದಾರೆ.
ಜನರಿಗೆ ತೆರಿಗೆ ರೂಪದಲ್ಲಿ ಹಾಕಿದ್ದ ಬರೆ ಹೆಚ್ಚಾಗಿದೆ ಎಂದು ಕೊನೆಗೂ ಅರಿವಾಗಿ ಈಗ ತೆರಿಗೆಯಲ್ಲಿ ವಿನಾಯತಿಗೊಳಿಸಿ ಅವರೇ ಈಗ ಸಂಭ್ರಮಾಚರಣೆ ಮಾಡುವುದು ಎಷ್ಟು ಸರಿ?
ಕೊನೆಗೂ ಹಾಕಿದ್ದ ತೆರಿಗೆ ಅತಿಯಾಗಿದೆ ಎಂದು ಅರ್ಥವಾಗಿದ್ದು ಸಮಾಧಾನದ ವಿಷಯವಾಗಿದೆ.
ಒಂದು ವೇಳೆ ಕಾಂಗ್ರೆಸ್ ಸರ್ಕಾರ ತೆರಿಗೆ ವಿಧಿಸಿದ್ದನ್ನು ಈ ಸರ್ಕಾರ ಬಂದು ತೆರಿಗೆಯನ್ನು ಇಳಿಸಿ ಜನರಿಗೆ ಅನುಕೂಲ ಮಾಡಿದ್ದೇವೆ ಎಂದಿದ್ದರೆ ನಾವುಗಳು ಸಂತೋಷ ಪಡುತಿದ್ದೆವು.
ತಾವೇ ಪೆಟ್ರೋಲ್ ಬಲೆ ₹120 ಮಾಡಿ ನಂತರ ₹100 ರೂಪಾಯಿ ಗೆ ತಂದು ಹೋಳಿ ಗಿಫ್ಟ್ ಅಂತಾರೆ.
ಗ್ಯಾಸ್ ಬೆಲೆ ₹1200 ಏರಿಕೆ ಮಾಡಿ ನಂತರ ₹900 ರೂ ಮಾಡಿ ನಂತರ ದೀಪಾವಳಿ ಬಂಪರ್ ಗಿಫ್ಟ್ ಅಂತಾರೆ. ಹಬ್ಬದ ಗಿಫ್ಟ್ ಕೊಡೋಕೆ ಇವ್ರ ಮನೆಯಿಂದ ತಂದು ಕೊಡ್ತಾ ಇದಾರ? ಇದೆ ಅಲ್ವ ಮೋದಿ ಸರ್ಕಾರದ ಮ್ಯಾಜಿಕ್ ಎಂದು ಹೇಳಿಕೆ ನೀಡಿದ್ದಾರೆ.
