Sunday, August 9, 2026
Homeಜಿಲ್ಲಾಸುದ್ದಿಹಾನುಬಾಳು: ಕಾಡುಮನೆ ಮಾವಿನಮರ ಗ್ರಾಮದಲ್ಲಿ ಭಾರಿ ಗಾತ್ರದ ಹೆಬ್ಬಾವು ಸೆರೆ

ಹಾನುಬಾಳು: ಕಾಡುಮನೆ ಮಾವಿನಮರ ಗ್ರಾಮದಲ್ಲಿ ಭಾರಿ ಗಾತ್ರದ ಹೆಬ್ಬಾವು ಸೆರೆ

Telegram Group
Join Now

ಸಕಲೇಶಪುರ: ತಾಲೂಕಿನ ಹಾನು ಬಾಳು ಹೋಬಳಿಯ ಕಾಡುಮನೆ ಗ್ರಾಮದ ಮಾವಿನ ಮರ ಗ್ರಾಮದ ಅವೀನ್ ಎಂ. ಕೆ. ಎಂಬುವವರ ಕಾಫಿ ತೋಟದ ಮರದ ಅಡಿಯಲ್ಲಿ ಸುಮಾರು 10 ಅಡಿ ಉದ್ದವಿರುವ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತ್ತು.

ಸಕಲೇಶಪುರ ಪಟ್ಟಣದ ಉರಗ ತಜ್ಞ ದಾಸ್ತಾಗಿರ್ ಮತ್ತು ಅವರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆಹಿಡಿದು ದೇಕ್ಲಾ ಸಮೀಪದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ಉರಗ ತಜ್ಞರಿಗೆ ಅರಣ್ಯ ಇಲಾಖೆಯಿಂದ ಹಾವುಗಳನ್ನು ಸೆರೆಹಿಡಿಯುವಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಸಕಲೇಶಪುರ ಉಪವಲಯ ಅಧಿಕಾರಿ ಹೇಮಂತ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments