Saturday, November 14, 2026
Homeಕ್ರೈಮ್ಶಿಕಾರಿ ಮಾಡಿ 10 ಅಡಿ ಆಳದಲ್ಲಿ ಹೂತಿಟ್ಟಿದ್ದ ಚುಕ್ಕಿ ಜಿಂಕೆ ಅವಶೇಷ: ಪತ್ತೆಹಚ್ಚಿದ ಅರಣ್ಯ ಇಲಾಖೆಯ...

ಶಿಕಾರಿ ಮಾಡಿ 10 ಅಡಿ ಆಳದಲ್ಲಿ ಹೂತಿಟ್ಟಿದ್ದ ಚುಕ್ಕಿ ಜಿಂಕೆ ಅವಶೇಷ: ಪತ್ತೆಹಚ್ಚಿದ ಅರಣ್ಯ ಇಲಾಖೆಯ ಶ್ವಾನ ದಳದ ʻರೋಜ್ಹಿʼ

Telegram Group
Join Now

ಚಿಕ್ಕಮಗಳೂರು: ತಾಲೂಕಿನ  ದೇವದಾನ ಗ್ರಾಮದಲ್ಲಿ ಚುಕ್ಕಿ ಜಿಂಕೆಯನ್ನು ಬೇಟೆಯಾಡಿದ್ದ ಓರ್ವ ಆರೋಪಿಯನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಪರಮೇಶ್ವ್ ಗೌಡ ಬಂಧಿತ ಆರೋಪಿ. ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಎಂಬವರು ಪರಾರಿಯಾಗಿದ್ದು, ಅಧಿಕಾರಿಗಳು ಇವರ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಾಲ್ವರು ಸೇರಿ ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಶಿಕಾರಿ ಮಾಡಿದ್ದರು. ಬಳಿಕ ಅದನ್ನು ಮಾಂಸ ಮಾಡಿ ಅಡುಗೆ ಮಾಡುವಾಗ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.

ಆರೋಪಿಗಳು ಚುಕ್ಕಿ ಜಿಂಕೆಯನ್ನು ಶಿಕಾರಿ ಮಾಡಿ ಅದರ ಅವಶೇಷಗಳನ್ನು 10 ಅಡಿ ಆಳದಲ್ಲಿ ಮುಚ್ಚಿಟ್ಟಿದ್ದರು. ಆ ಅವಶೇಷಗಳನ್ನು ಅರಣ್ಯ ಇಲಾಖೆಯ ಶ್ವಾನ ದಳದ ರೋಜ್ಹಿ ಹೆಸರಿನ ಶ್ವಾನ ಪತ್ತೆಹಚ್ಚಿದೆ. ಅಲ್ಲದೇ ಮಾಂಸವನ್ನು ಎರಡು ಮನೆಯಲ್ಲಿ ಹಂಚಿಕೆ ಮಾಡಿ ಅಡುಗೆ ಮಾಡಿರುವುದನ್ನ ಸಹ ಶ್ವಾನ ಪತ್ತೆಹಚ್ಚಿದೆ.

ಆರೋಪಿಗಳ ವಿರುದ್ಧ ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!