Friday, November 13, 2026
Homeಕ್ರೈಮ್ಬೆಂಗಳೂರಲ್ಲಿ ಹೆಂಡ್ತಿ ಕಣ್ಣ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ!

ಬೆಂಗಳೂರಲ್ಲಿ ಹೆಂಡ್ತಿ ಕಣ್ಣ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ!

Telegram Group
Join Now

ಬೆಂಗಳೂರು:ನಡುರಸ್ತೆಯಲ್ಲೇ, ಹೆಂಡ್ತಿ ಕಣ್ಣ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್‌ನಲ್ಲಿ ನಡೆದಿದೆ. 39 ವರ್ಷದ ಚರಣ್​ ಗೌಡ ಕೊಲೆಯಾದ ದುರ್ದೈವಿ . ಸ್ಥಳಕ್ಕೆ ಯಲಹಂಕ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಿಯಲ್​ ಎಸ್ಟೇಟ್ ಉದ್ಯಮಿ ಚರಣ್ ಗೌಡ ತನ್ನ ಹೆಂಡ್ತಿ ಜೊತೆಯಲ್ಲಿರುವಾಗಲೇ ಹಂತಕರು ಅಟ್ಯಾಕ್ ಮಾಡಿದ್ದು, ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಣ್ಣ ಮುಂದೆಯೇ ಗಂಡನ ಜೀವ ಹೋಗಿದ್ದನ್ನು ಕಂಡು ಪತ್ನಿ ಕುಸಿದು ಬಿದ್ದು ಕಣ್ಣೀರು ಹಾಕಿದ್ದಾರೆ. ಬ್ಯಾಂಕ್ ಮುಂಭಾಗದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ರಾಮನಗರ ಮೂಲದ ಚರಣ್ ಗೌಡ, ಕಳೆದ ಹತ್ತು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸ್ತಿದ್ದ ಯಲಹಂಕ ಭಾಗದಲ್ಲಿ ಲ್ಯಾಂಡ್, ಸೈಟ್ ರಿಯಲ್ ಎಸ್ಟೇಟ್ ಮಾಡ್ತಿದ್ದನಂತೆ. ಲ್ಯಾಂಡ್ ವಿಚಾರವಾಗಿ ಕಿರಿಕ್ ಆಗಿದ್ದು, ಈ ವಿಚಾರಕ್ಕೆ ಹತ್ಯೆ ನಡೆದಿರೋ ಶಂಕೆ ಕೂಡ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಹಾಗೂ ಮೃತನ ಪತ್ನಿ ಬಳಿ ಹಂತಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!