Friday, November 13, 2026
Homeಗ್ರೇಟರ್ ಬೆಂಗಳೂರುPM Modi In Bangalore: ಜಿಗಣಿ ಸಮೀಪವಿರುವ ಪ್ರಶಾಂತಿ ಕುಟೀರದಲ್ಲಿ ಪ್ರಧಾನಿ: ಡಾ.ರಾಜ್​ಕುಮಾರ್ ಅವರನ್ನ ಸ್ಮರಿಸಿದ...

PM Modi In Bangalore: ಜಿಗಣಿ ಸಮೀಪವಿರುವ ಪ್ರಶಾಂತಿ ಕುಟೀರದಲ್ಲಿ ಪ್ರಧಾನಿ: ಡಾ.ರಾಜ್​ಕುಮಾರ್ ಅವರನ್ನ ಸ್ಮರಿಸಿದ ಮೋದಿ!!

Telegram Group
Join Now

ಬೆಂಗಳೂರು : ನಗರದ ಜಿಗಣಿ ಸಮೀಪವಿರುವ ಪ್ರಶಾಂತಿ ಕುಟೀರದ 50ನೇ ವರ್ಷದ ಸಂಭ್ರಮಾಚರಣೆ ಮತ್ತು ಚಿಂ ಸಂಘಟಕರಾಗಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ  ಅವರ ಜನ್ಮ ಶತಮಾನೋತ್ಸವವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಯೋಗ ಪರಂಪರೆಯ ಕುರಿತು ಮಾತನಾಡುವಾಗ ಡಾ.ರಾಜ್​ಕುಮಾರ್ ಅವರನ್ನೂ ಸ್ಮರಿಸಿದ್ದಾರೆ.

ಈ ವೇಳೆ ಮೋದಿ ಅವರು ಯೋಗ ಪರಂಪರೆಯ ಕುರಿತು ಮಾತನಾಡುವಾಗ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅವರನ್ನು ವಿಶೇಷವಾಗಿ ಸ್ಮರಿಸಿದರು . ಕರ್ನಾಟಕವು ಶತಮಾನಗಳಿಂದ ಯೋಗದ ಕೇಂದ್ರವಾಗಿದೆ ಎಂದು ಶ್ಲಾಘಿಸಿದ ಅವರು, ಅಣ್ಣಾವ್ರ ಯೋಗಾಭ್ಯಾಸ ಮತ್ತು ಕಲಾ ಕ್ಷೇತ್ರದ ಕೊಡುಗೆಯನ್ನು ಕೊಂಡಾಡಿದರು.

ಕರ್ನಾಟಕದ ಈ ಶ್ರೀಮಂತ ಪರಂಪರೆಯ ನಡುವೆ, ಎಸ್-ವ್ಯಾಸ (S-VYASA) ಸಂಸ್ಥೆಯ ಪ್ರಶಾಂತಿ ಕುಟೀರವು ಕಳೆದ 50 ವರ್ಷಗಳಿಂದ ಯೋಗ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!